ಬಿಜೆಪಿ ಪಕ್ಷ ಚುನಾವಣೆಯನ್ನು ಗೆಲ್ಲಲು ಹಲವಾರು ರೀತಿಯಾಗಿ ತಂತ್ರವನ್ನು ಹುಡುಕುತಿದ್ದಾರೆ. ಕಾಂಗ್ರೆಸ್ನ ಬಗ್ಗೆ ಹಲವಾರು ರೀತಿಯಲ್ಲಿ ನಿಂದಿಸುವುದರ ಮೂಲಕ ಜನರ ಮನಸನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಬೆಂಗಳೂರು ನಗರ ಐಟಿ ಕ್ಷೇತ್ರದಲ್ಲಿ ಬಹಳ ಮುಂಚುಣಿಯಲ್ಲಿದ್ದು ಹಲವಾರು ರೀತಿಯಲ್ಲಿ ಬವೆಳವಣಿಗೆಯನ್ನು ಸಾಧಿಸಿದೆ. ಈಗಾಗಲೆ ಜಾಗತೀಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದ ಬೆಂಗಳೂರುಗೆ ಈಗ ಮತ್ತೆ ಹಲವು ಐಟಿ ಕಂಪನಿಗಳನ್ನು ತರುವ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯಿಂದ ಹಲವಾರು ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿನಿರುದ್ಯೋಗ ಸಮಸ್ಸೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ದೃಷ್ಟಿಯಿಂದ ಫೊಕ್ಸಾನ್ ಮತ್ತು ಐಫೋನ್ ಕಂಪನಿಗಳನ್ನು ಬೆಂಗಳೂರಿಗೆ ತರಲಿದ್ದೇವೆ.
ನಿನ್ನೆ ಕೆ ಆರ್ ಪುರಂನಲ್ಲಿ ವಿಜಯ ಸಮಕಲ್ಪ ಯಾತ್ರೆಯಲ್ಲಿ ಮಾತನಾಡಿದ ಜೆಪಿ ನಡ್ಡಾಅವರು “ಸಮಗ್ರ ಅಭಿವೃದ್ಧಿಗೆ ಒಲವು ತೋರುವ ಏಕೈಕ ಪಕ್ಷ ಬಿಜೆಪಿ” ಎಂದು ಮತದಾರರಿಗೆ ಮನವರಿಕೆ ಮಾಡಲು ಹೊರಟರು. ಐಫೋನ್, ಫಾಕ್ಸ್ಕಾನ್ ಉತ್ಪಾದಕ ಕಂಪೆನಿಗಳು ಬೆಂಗಳೂರಿನಲ್ಲಿ ಘಟಕಗಳನ್ನು ಸ್ಥಾಪಿಸಲಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ, ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಅನಾವರಣ, ತುಮಕೂರಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಉದ್ಘಾಟಿಸಿದರು ಎಂದು ಸ್ಮರಿಸಿದರು.
ಭ್ರಷ್ಟಾಚಾರ ಮತ್ತು ವಂಶಾಡಳಿತದ ರಾಜಕೀಯಕ್ಕೆ ಬಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರೆದರು. ಲೋಕಾಯುಕ್ತ ದಾಳಿಯ ನಂತರ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಮಯದಲ್ಲಿ ಅವರ ಪ್ರತಿಕ್ರಿಯೆ ಬಂದಿದೆ, ಆದರೆ ರಾಜ್ಯ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ಸರ್ಕಾರಕ್ಕೆ ಮುಜುಗರದ ಪ್ರಸಂಗವನ್ನು ಒಪ್ಪಿಕೊಂಡಿದ್ದಾರೆ.
ಮುಳಬಾಗಿಲು ಕ್ಷೇತ್ರದಲ್ಲಿ ಸಮೃದ್ಧಿ ಮಂಜುನಾಥ್ ಕಹಳೆ, ಜೆಡಿಎಸ್ ಗೆಲ್ಲಿಸುವಂತೆ ಸಮೃದ್ಧಿ ಮಂಜುನಾಥ್ ಮನವಿ
ಸಾವಿರ ಕೋಟಿ ಆಸ್ತಿ ಬಗ್ಗೆ ಬಾಂಬ್ ಸಿಡಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ