ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

www.karnatakatv.net : ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮಹಾನಗರ ಪಾಲಿಕೆಯ 26 ವಾರ್ಡ್‌ಗಳಿಗೆ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತಗೊಳಿಸಿದ್ದು, ನಿನ್ನೆ ತಡರಾತ್ರಿ ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

26 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿರುವ ಅರವಿಂದ ಬೆಲ್ಲದ ಅವರು ಫೈನಲ್ ಮಾಡಿ ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡದ ಒಟ್ಟು 82 ವಾರ್ಡ್‌ಗಳ ಪೈಕಿ 26 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ.

ಹಳೇಯ ಮುಖಗಳಾದ ಶಿವು ಹಿರೇಮಠ, ರಾಮಣ್ಣ ಬಡಿಗೇರ, ವಿಜಯಾನಂದ ಶೆಟ್ಟಿ, ಈರಣ್ಣ ಸವಡಿ, ಶಂಕರ ಶೇಳಕೆ, ಪಾಂಡುರಂಗ ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ಸತೀಶ ಹಾ‌ನಗಲ್ ಇವರಿಗೆ ಟಿಕೆಟ್ ನೀಡಿ ಮತ್ತೊಮ್ಮೆ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಈ ಮೊದಲ ಪಟ್ಟಿಯಲ್ಲಿ ಹೊಸಬರಿಗೂ ಅವಕಾಶ ನೀಡಲಾಗಿದೆ. ಮಹೇಂದ್ರ ಕೌತಾಳ, ಈರೇಶ ಅಂಚಟಗೇರಿ  ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ.

ಕರ್ನಾಟಕ ಟಿವಿ ಹುಬ್ಬಳ್ಳಿ

About The Author