www.karnatakatv.net : ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಇಂಗ್ಲೆಂಡ್ ಇನ್ನೂ ಆಘಾತದಿಂದ ಹೊರಬಂದಿಲ್ಲ. ಇದರ ನಡುವೆ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ರಿಂದ ಲೀಡ್ಸ್ನಲ್ಲಿ ಪ್ರಾರಂಭವಾಗಲಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ರಿಂದ ಲೀಡ್ಸ್ನಲ್ಲಿ ಪ್ರಾರಂಭವಾಗಲಿದೆ. ಆದರೆ, ಈ ಹೊತ್ತಿಗೆ ವುಡ್ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ರಿಂದ ಲೀಡ್ಸ್ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ಇದರಲ್ಲಿ ಮಾರ್ಕ್ ವುಡ್ ಹೆಸರು ಕೂಡ ಇದೆ. ಆದರೆ, ಈ ಹೊತ್ತಿಗೆ ವುಡ್ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ. ಇದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತವಾಗಿದ್ದು, ಮತ್ತೊಬ್ಬ ಪ್ರಮುಖ ಆಟಗಾರನನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
ಈಗಾಗಲೇ ಇಂಗ್ಲೆಂಡ್ ತಂಡದಲ್ಲಿನ ಆಟಗಾರರು ಸತತ ಇಂಜುರಿಯಿಂದ ಬಳಲುತ್ತಿದ್ದಾರೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಮಾನಸಿಕ ಸಡೃಢತೆಗಾಗಿ ಬೆನ್ ಸ್ಟೋಕ್ಸ್ ಹಿಂದೆ ಸರಿದಿದ್ದರೆ, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಬಿದ್ದರು. ಇದೀಗ ಗಾಯಾಳುಗಳ ಪಟ್ಟಿಗೆ ಮಾರ್ಕ್ ವುಡ್ ಸೇರ್ಪಡೆಯಾಗಿದ್ದಾರೆ. ಇನ್ನೂ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಚ್ಚರಿಯ ತಂಡವನ್ನು ಪ್ರಕಟಮಾಡಿದೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ಡಾವಿಡ್ ಮೆಲನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿರುವ ಎಡಗೈ ಆಟಗಾರ ಡಾವಿಡ್ ಮಲಾನ್, ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ