Monday, December 23, 2024

Latest Posts

ಪೆಗಾಸಸ್ ಕದ್ದಾಲಿಕೆ ಕುರಿತು ಕೇಂದ್ರ ಸರಕಾರದ ವಿರುದ್ದ ಬಿ.ಕೆ.ಹರಿಪ್ರಸಾದ್ ಗರಂ

- Advertisement -

www.karnatakatv.net : ಬೆಳಗಾವಿ: ಪೆಗಾಸೆಸ್‍ನಲ್ಲಿ 100 ಜನ ರಾಜಕೀಯ ನಾಯಕರು, 500 ಪತ್ರಕರ್ತರು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಟೆಲಿಫೋನ್ ಕದ್ದಾಲಿಕೆ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದರು ಸಹ ಕೇಂದ್ರ ಬಿಜೆಪಿ ಸರಕಾರ ಸದನದಲ್ಲಿನ ಗಲಾಟೆ ಯಾವುದೇ ವೈಯಕ್ತಿಕ ವಿಚಾರಕ್ಕೆ ಅಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಎಂಎಲ್‍ಸಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ಮಾಡಿದರು.

ಸೋಮವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ನಾಯಕರಿಂದ ಜಂಟಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಈ ವೇಳೆ ರಾಜ್ಯಸಭಾ ಘನತೆ ಗೌರವ ಸದಸ್ಯರು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂಬ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಹೇಳಿಕೆ ವಿರುದ್ಧ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ ಬಿ.ಕೆ.ಹರಿಪ್ರಸಾದ್.

ನಾನು ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಿರುವೆ ಎಂದು ಬಿ.ಕೆ.ಹರಿಪ್ರಸಾದ ಅವರು ಅಕ್ರೋಶ ವ್ಯಕ್ತಪಡಿಸಿದರು. ಹಾಗೆಯೆ ಒಂದು ಸದನದ ಸ್ಪೀಕರ್ ಇನ್ನೊಂದು ಸದನದ ಬಗ್ಗೆ ಟಿಪ್ಪಣಿ ಮಾಡಿರುವುದು ಸರಿಯಲ್ಲ. ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಜೆಪಿಯವರು ಚಳಿಗಾಲ ಅಧಿವೇಶನ ನಡೆಸಲು ಬಿಡಲಿಲ್ಲ ಎಂದು ಅಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಪಕ್ಷ ಒಳಗೊಂಡು ಎಲ್ಲಾ ವಿಪಕ್ಷಗಳು ಪೆಟ್ರೋಲ್ ಬೆಲೆ ಏರಿಕೆ,ರೈತ ವಿರೋಧಿ ಮಸೂದೆಗಳ ಹಾಗೂ  ಪೆಗಾಸೆಸ್ ಬಗ್ಗೆ ಚರ್ಚೆ ಆಗಬೇಕೆಂದು ವಿರೋಧ ಪಕ್ಷದವರಾಗಿ ನಾವು ಒತ್ತಾಯಿಸಿದವು. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಲಿಲ್ಲ ಕೊಡಲಿಲ್ಲ ಎಂದು ಹರಿಹಾಯ್ದರು.

ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯರಾದ ನಾಸೀರಹುಸೇನ್, ಎಲ್.ಹನುಮಂತಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಇನ್ನಿತರ ನಾಯಕರು ಉಪಸ್ಥಿತರಿದ್ದರು

ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ

- Advertisement -

Latest Posts

Don't Miss