ಬೆಂಗಳೂರು: ಅನಿರುದ್ಧ ಜೋಶಿ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮಹಾರಾಜ ಟಿ20 ಟ್ರೋಫಿಯಲ್ಲಿ ಮಂಗಳೂರು ಯುನೈಟಡ್ ವಿರುದ್ಧ 66 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಬ್ಲಾಸ್ಟರ್ಸ್ ವಿರುದ್ಧ ಮಂಗಳೂರು ತಂಡಕ್ಕೆ ಇದು ಎರಡನೆ ಸೋಲಾಗಿದೆ.
ಮೈಸೂರಿನ ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟರ್ ಚೇತನ್ (6) ಅವರ ವಿಕೆಟ್ ಕಳೆದುಕೊಂಡು ಬೆಂಗಳೂರು ತಂಡ ಆಘಾತ ಅನುಭವಿಸಿತು.
ನಂತರ ನಾಯಕ ಮಯಾಂಕ್ ಅಗರ್‍ವಾಲ್ (47 ರನ್)ಜೊತೆಗೂಡಿದ ಅನೀಶ್ ( 40 ರನ್) ಉತ್ತಮ ಸಾಥ್ ಕೊಟ್ಟರು. ಈ ಜೋಡಿ ಎರಡನೆ ವಿಕೆಟ್‍ಗೆ 74 ರನ್ ಸೇರಿಸಿದರು. 47 ರನ್ ಗಳಿಸಿದ್ದ ಮಯಾಂಕ್, ವೈಶಾಕ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಅನೀಶ್ ಸೋಮಣ್ಣಗೆ ವಿಕೆಟ್ ಒಪ್ಪಿಸಿದರು.
ಶಿವಕುಮಾರ್ ರಕ್ಷಿತ್ (34 ರನ್) ಹಾಗೂ ಅನಿರುದ್ಧ ಜೋಶಿ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿದರು. ಅನಿರುದ್ಧ ಜೋಶಿ 24 ಎಸೆತದಲ್ಲಿ 7 ಬೌಂಡರಿ 3 ಸಿಕ್ಸರ್ ಸಿಡಿಸಿ ಅಜೇಯ 57 ರನ್ ಕಲೆ ಹಾಕಿದರು.
ಅಂತಿಮವಾಗಿ ಬೆಂಗಳೂರು ಬ್ಲಾಸ್ಟರ್ಸ್ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
192 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಮಂಗಳೂರು ಯುನೈಟೆಡ್ ತಂಡಕ್ಕೆ ವೇಗಿ ತಿಪ್ಪೆಸ್ವಾಮಿ ಪ್ರದೀಪ್ ಆಘಾತ ನೀಡಿದರು. ನೊರೊನ್ಹ 5, ನಿಕಿನ್ ಜೋಸ್ 7, ಸುಜಯ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು. 32 ರನ್ ಗಳಿಸಿದ್ದ ಆರ್.ಸಮರ್ಥ್ ಬೋಪಣ್ಣಗೆ ಬಲಿಯಾದರು. ಅನಿಶ್ವರ್ ಗೌತಮ್ 1, ಅಭಿನವ್ ಮನೋಹರ್ 23, ಆದಿತ್ಯ ಸೋಮಣ್ಣ 11, ವೆಂಕಟೇಶ್ 2, ಶರತ್ ಅಜೇಯ 22, ವಿಜಯ್ ಕುಮಾರ್ 10 ರನ್ ಗಳಿಸಿದರು.
ಅಂತಿಮವಾಗಿ ಮಂಗಳೂರು ಯುನೈಟೆಡ್ 16 ಓವರ್‍ಗಳಲ್ಲಿ 125 ರನ್ ಗಳಿಗೆ ಸರ್ವಪತನ ಕಂಡಿತು. ಬ್ಲಸ್ಟಾರ್ಸ್ ಪರ ಪ್ರದೀಪ್ 20ಕ್ಕೆ 3, ರಿಷಿ ಬೋಪಣ್ಣ 26ಕ್ಕೆ 3, ಕ್ರಾಂತಿ 13ಕ್ಕೆ 2, ಎಲ್.ಆರ್. ಕುಮಾರ್ ಹಾಗೂ ಜಗದೀಶ್ ಸುಚಿತ್ ತಲಾ ಒಂದು ವಿಕೆಟ್ ಪಡೆದರು.