ಬೆಂಗಳೂರು: ರಾಜ್ಯದಲ್ಲಿ ಮಾಂಡೌಸ್ ಮಾರುತದ ಪ್ರಭಾವದಿಂದ ಮಳೆಯಾಗುತ್ತಿದ್ದು, ಈಗಿರುವ ಹವಾಮಾನ ಎಲ್ಲರನ್ನೂ ಆತಂಕಕ್ಕಿಡು ಮಾಡಿದೆ. ಚಳಿಗಾಲದಲ್ಲೂ ಅಕಾಲಿಕ ಮಳೆಯಿಂದ ಶೀತ ಗಾಳಿ ಹೆಚ್ಚಾಗಿದ್ದು, ಮನೆಯಲ್ಲಿ ಚಿಕ್ಕಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಳ್ಳುತ್ತಿದೆ. ಆದರೆ ಮಕ್ಕಳಲ್ಲಿ ಜ್ವರ ಕಾಣಿಸಿದರೆ ಶೀತ ಗಾಳಿಯಿಂದ ಬಂದ ಮಾಮೂಲಿ ಜ್ವರ ನೆಗಡಿಯೆಂದು ಜನ ಭಾವಿಸುತ್ತಿದ್ದಾರೆ. ರಾಜಧಾನಿಯಲ್ಲಿ ಹೊಸ ರೋಗವೊಂದು ಕಾಲಿಟ್ಟಿದ್ದು, ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ ಇದಕ್ಕೆ ಬ್ಲೂ ಫೀವರ್ ಎಂದು ಹೇಳಲಾಗುತ್ತದೆ.
ನಾಳೆ ನಡೆಯುವ ಜೆಪಿ ನಡ್ಡಾ ಕಾರ್ಯಕ್ರಮಕ್ಕೆ ಬಿಎಸ್ ವೈಗೆ ಅಧಿಕೃತ ಆಹ್ವಾನವಿಲ್ಲ
ಮಕ್ಕಳಲ್ಲಿ ಜ್ವರ, ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ. ಹವಾಮಾನ ಬದಲಾವಣೆಯಿಂದ ಮಕ್ಕಳಲ್ಲಿ ಜ್ವರ, ನೆಗಡಿ ಹೆಚ್ಚಾಗುತ್ತಿದ್ದು, ಹೊಸ ಕಾಯಿಲೆಯಿಂದ ಜನರು ಕಂಗಾಲಾಗಿದ್ದಾರೆ. ಈ ಬ್ಲೂ ಫೀವರ್ ಅಮೆರಿಕಾ, ಕೆನಾಡದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಪ್ರಾಣಿಗಳ ಉಣ್ಣೆಯಿಂದ ಇದು ಹರಡುವ ಸಾಧ್ಯತೆಯಿರುತ್ತದೆ. ನಾಯಿಗಳ ಟಿಕ್ ಫೀವರ್ನಿಂದ ಸೋಂಕು ಹರಡುವ ಸಾಧ್ಯತೆಯಿದೆ. ಈ ಜ್ವರ ಬಂದರೆ ತಲೆ ನೋವು, ಜ್ವರ , ಸುಸ್ತು, ಶೀತ, ಕಣ್ಣು ಕೆಂಪು, ಮೈ ಕೈ ನೋವು ಮತ್ತು ಮಂಡಿ ನೋವುಗಳಂತ ಲಕ್ಷಣಗಳು ಕಾಣಿಸುತ್ತವೆ.
ಹುಲಿ ಯೋಜನೆ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ಆರೋಪ : ಸ್ಯಾಂಡಲ್ ವುಡ್ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ