- Advertisement -
ಬೆಂಗಳೂರು: ಬಿಎಂಟಿಸಿ ವಿದ್ಯಾರ್ಥಿ ಪಾಸ್ ಸಂಜೆ 7.30ರ ನಂತರವೂ ಉಪಯೋಗಿಸಬಹುದೆಂದು ಬಿಎಂಟಿಸಿ ಆದೇಶ ನೀಡಿದೆ. ಬಸ್ ಕಂಡಕ್ಟರ್ ವಿದ್ಯಾರ್ಥಿಗಳಿಗೆ 7.30ರ ನಂತರ ಸಂಚರಿಸುವ ವಿದ್ಯಾರ್ಥಿಗಳಿಗೆ ಪಾಸ್ ಮಾನ್ಯವಿಲ್ಲವೆಂದು ಟಿಕೆಟ್ ನೀಡಬಾರದು ಎಂದು ಬಸ್ ನಿರ್ವಾಹಕರಿಗೆ ಬಿಎಂಟಿಸಿ ಹೇಳಿದೆ.
7.30 ರ ನಂತರ ವಿದ್ಯಾರ್ಥಿಗಳಿಗೆ ಪಾಸ್ ಮಾನ್ಯವಿಲ್ಲವೆಂದು ಕಂಡಕ್ಟರ್ ಟಿಕೇಟ್ ನೀಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ನೀಡಿದ್ದರು. ವಿದ್ಯಾರ್ಥಿಗಳ ದೂರು ಪರಿಶೀಲಿಸಿ ಯಾವ ಸಮಯದಲ್ಲಾದರೂ ವಿದ್ಯಾರ್ಥಿ ಪಾಸ್ ಉಪಯೋಗಿಸಬಹುದೆಂದು ಬಿಎಂಟಿಸಿ ಆದೇಶ ನೀಡಿದೆ.
- Advertisement -