Wednesday, November 29, 2023

Latest Posts

2 ಬಾಳೆಹಣ್ಣಿನ ಬಿಲ್ ನೋಡಿ ಬಾಲಿವುಡ್ ನಟ ಶಾಕ್…!

- Advertisement -

ಚಂಡೀಗಢ: ಸಾಮಾನ್ಯವಾಗಿ ಒಂದು ಕೆ.ಜಿ ಬಾಳೆಹಣ್ಣಿನ ಬೆಲೆ 100 ರೂಪಾಯಿಯ ಆಸುಪಾಸಿನಲ್ಲಿರುತ್ತೆ. ಆದರೆ ತಾನು ಖರೀದಿಸಿದ್ದ ಎರಡೇ ಎರಡು ಬಾಳೇಹಣ್ಣಿನ ಬಿಲ್ ನೋಡಿ ಖುದ್ದು ಬಾಲಿವುಡ್ ನಟನಿಗೇ ಶಾಕ್ ಆಗಿದೆ.

ದಿನಕ್ಕೊಂದು ಬಾಳೆಹಣ್ಣು ತಿನ್ನೋದ್ರಿಂದ ಪಚನ ಕ್ರಿಯೆ ಸರಾಗವಾಗಿ ಆಗುತ್ತೆ. ಆದ್ರೆ ಬಾಲಿವುಡ್ ನಟ ರಾಹುಲ್ ಬೋಸ್ ಮೊನ್ನೆ ತಾವು ಖರೀದಿ ಮಾಡಿದ್ದ ಎರಡು ಬಾಳೆ ಹಣ್ಣಿನ ಬೆಲೆ ಅವರ ಹೊಟ್ಟೆಉರಿಸಿದೆ. ಹೌದು, ಚಂಡೀಗಢದ ಪಂಚತಾರಾ ಹೋಟೆಲ್ ಜೆ.ಡಬ್ಲ್ಯು ಮ್ಯಾರಿಯೆಟ್ ಹೋಟೆಲ್ ನಲ್ಲಿ ತಂಗಿದ್ದ ನಟ ರಾಹುಲ್ ಬೋಸ್ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಅಲ್ಲಿನ ಸಿಬ್ಬಂದಿಗೆ 2 ಬಾಳೆಹಣ್ಣು ತಂದುಕೊಡುವಂತೆ ಕೇಳಿದ್ದಾರೆ. ನಟನ ಆರ್ಡರ್ ನಂತೆ ಸಪ್ಲೈಯರ್ ತಟ್ಟೆಯೊಂದರಲ್ಲಿ 2 ಬಾಳೆಹಣ್ಣಿನ ಜೊತೆಗೆ ಅದರ ಬಿಲ್ ಕೂಡ ತಂದಿಟ್ಟಿದ್ದಾನೆ. ಇನ್ನೇನು ಹಣ್ಣು ತಿನ್ನೋಣವೆಂದುಕೊಂಡಿದ್ದ ರಾಹುಲ್ ಬೋಸ್ ಅಕಸ್ಮಾತಾಗಿ ಮೊದಲು ಬಿಲ್ ನ ಮೊತ್ತ ನೋಡಿ ಶಾಕ್ ಆಗಿದ್ದಾರೆ. ಯಾಕಂದ್ರೆ ಅವರಿಗೆ ತಂದುಕೊಡಲಾಗಿದ್ದ ಎರಡು ಬಾಳೆಹಣ್ಣಿನ ಬೆಲೆ ನೂರಲ್ಲ, ಇನ್ನೂರಲ್ಲ, ಬರೋಬ್ಬರಿ 442.50ಪೈಸೆ ಅಂತ ಬಿಲ್ ನಲ್ಲಿ ಬರೆಯಲಾಗಿತ್ತು.

ಬಾಲಿವುಡ್ ನಟ ರಾಹುಲ್ ಬೋಸ್

ಇದನ್ನು ನೋಡಿ ಕಂಗಾಲಾದ ನಟ, ನಮ್ಮ ಮನೆ ಬಳಿಯ ಮಾರ್ಕೆಟ್ ನಲ್ಲಿ ಈ ಬಾಳೆಹಣ್ಣು ಹತ್ತೋ ಇಪ್ಪತ್ತೋ ರೂಪಾಯಿಗೆ ಸಿಗುತ್ತೆ ಅಂಥಾಹುದ್ರಲ್ಲಿ ಈ ಹೋಟೆಲ್ ನವರು ನನಗೆ ಈ ರೀತಿ ಟೋಪಿ ಹಾಕ್ತಿದ್ದಾರಲ್ಲಾ ಅಂತ ಕೋಪಗೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ನಟ ರಾಹುಲ್ ತಮ್ಮ ಟ್ವಿಟ್ಟರ್ ನಲ್ಲಿ ತಾವು ತಂಗಿದ್ದ ಹೋಟೆಲ್ ಮಾಡಿದ್ದ ಘನ ಕಾರ್ಯದ ಕುರಿತು ವಿಡಿಯೋ ಶೇರ್ ಮಾಡಿಕೊಳ್ಳೋ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅಂದಹಾಗೆ, ಆ ಎರಡೂ ಬಾಳೆಹಣ್ಣುಗಳ ಅಸಲಿ ಬೆಲೆ 375 ರೂಪಾಯಿ ಮತ್ತು 66.50 ಪೈಸೆ ಜಿಎಸ್ ಟಿಯನ್ನೂ ಒಳಪಟ್ಟಿದೆ..!

- Advertisement -

Latest Posts

Don't Miss