Bollywood: ಬಾಲಿವುಡ್ ನಟಿ ರವೀನಾ ಟಂಡನ್ ತಾಯಿಯ 25 ಲಕ್ಷ ರೂ. ಬೆಲೆಬಾಳುವ ಚಿನ್ನ, ವಜ್ರಾಭರಣ ಮತ್ತು ವಾಚ್ ಕಳ್ಳತನವಾಗಿದೆ. ಈ ಬಗ್ಗೆ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ದೂರು ನೀಡಿದ್ದು, ಪೋಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಈ ಸಂಬಂಧ ರವೀನಾ ಮುಂಬೈನ ಜುಹು ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಜುಹು ಪೋಲೀಸರು ತನಿಖೆ ನಡೆಸಿ, ರವೀನಾ ತಾಯಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ರಾಶಿ ಛಾಬ್ರಿಯಾ ಎಂಬಾಕೆಯನ್ನು ಬಂಧಿಸಿದ್ದಾರೆ.
ಈಕೆ 2020ರಿಂದ ರವೀನಾ ತಾಯಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯವಾಗಿದ್ದು, ಆಗಾಗ ಮನೆಗೆ ಬರುತ್ತಿದ್ದಳಂತೆ. ಹೀಗೆ ಕೆಲ ದಿನಗಳ ಹಿಂದೆ ಬಂದು, ಲಾಕರ್ನಲ್ಲಿದ್ದ ವಜ್ರಾಭರಣ, ಮತ್ತು 2 ಬೆಲೆ ಬಾಳುವ ವಾಚ್ ಕದ್ದಿದ್ದಾಳೆ.
ಆದರೆ ರವೀನಾ ತಾಯಿ ರಾಶಿಗೆ ಕಾಲ್ ಮಾಡಿ ಈ ಬಗ್ಗೆ ಕೇಳಿದಾಗ, ತನಗೆ ಈ ಬಗ್ಗೆ ಮಾಹಿತಿ ಇಲ್ಲವೆಂದು ಹೇಳಿದ್ದಾರೆ. ಬಳಿಕ ರವೀನಾ ತಾಯಿ ಅನುಮಾನ ಬಂದು ಈಕೆಯ ವಿರುದ್ಧ ದೂರು ನೀಡಿದ್ದು, ಪೋಲೀಸರು ತನಿಖೆ ಮಾಡಿ ರಾಶಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ರಾಶಿ ತಾನು ಕಳ್ಳತನ ಮಾಡಿದ್ದಾಗಿ ಹೇಳಿದ್ದಾಳೆ. ಬಳಿಕ ಆಕೆಯಿಂದ ಕಳುವಾಗಿ ಕೆಲ ಆಭರಣ ವಶಕ್ಕೆ ಪಡೆದಿದ್ದಾರೆ. ಬೆಲೆಬಾಳುವ ವಾಚ್ ಮಾತ್ರ ಇನ್ನೂ ಸಿಗಬೇಕಿದ್ದು, ಪೋಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.




