- Advertisement -
Bollywood: ಬಾಲಿವುಡ್ ನಟ ಅಚ್ಯುತ್ ಪೋತ್‌ದಾರ್ ಇಂದು ನಿಧನರಾಗಿದ್ದಾರೆ. 91 ವರ್ಷ ವಯಸ್ಸಿನ ಅಚ್ಯುತ್ ಪೋತ್‌ದಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಥಾಣೆಯ ಜ್ಯೂಪಿಟರ್ ಆಸ್ಪತ್ರೆಯಲ್ಲಿ ಅಚ್ಯುತ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.
ಅಚ್ಯುತ್ ಅವರು ತ್ರೀ ಈಡಿಯಟ್ಸ್ ಸೇರಿ ಹಲವು ಚಿತ್ರಗಳಲ್ಲಿ, ಸಿರಿಯಲ್‌ನಲ್ಲೂ ನಟಿಸಿದ್ದಾರೆ. ಅಚ್ಯುತ್ ಸಾವಿಗೆ ಬಾಲಿವುಡ್ ಚಿತ್ರರಂಗ, ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.
- Advertisement -