Bollywood: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್- ನಟಿ ಕತ್ರೀನಾ ಕೈಫ್

Bollywood News: ಬಾಲಿವುಡ್ ಕ್ಯೂಟ್ ಕಪಲ್ ಆಗಿರುವ ನಟ ವಿಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನು ಕತ್ರೀನಾ ಆಗಲಿ, ವಿಕಿ ಆಗಲಿ ಇನ್ನೂ ಅನೌನ್ಸ್ ಮಾಡಲಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ, ಕತ್ರೀನಾ ಗರ್ಭಿಣಿಯಾಗಿದ್ದು, ಇದೇ ವರ್ಷ ಮಗು ಜನಿಸಲಿದೆ ಎನ್ನಲಾಗಿದೆ.

ಈ ಹಿಂದೆ ಲಂಡನ್‌ನಲ್ಲಿ ವಿಕಿ ಮತ್ತು ಕತ್ರೀನಾ ತಿರುಗುತ್ತಿದ್ದ ಫೋಟೋ, ವೀಡಿಯೋ ವೈರಲ್ ಆಗಿತ್ತು. ಆಗ ಕತ್ರೀನಾ ಅವರನ್ನು ನೋಡಿ, ಈಕೆ ಗರ್ಭಿಣಿ ಎಂದೆನ್ನಿಸುತ್ತಿದ್ದಾಳೆ. ಹಾಗಾಗಿ ಲಂಡನ್‌ನಗೆ ಶಿಫ್ಟ್ ಆಗಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು. ಆಗಲೂ ವಿಕಿ ಕತ್ರೀನಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕತ್ರೀನಾ ಗರ್ಭಿಣಿಯಾಗಿದ್ದಾರೆ ಅಂತಲೇ ಹೇಳಲಾಗುತ್ತಿದೆ.

ಕತ್ರೀನಾ ವಿದೇಶಿ ಪ್ರಜೆಯಾಗಿದ್ದು, ಮುಸ್ಲಿಂ ಧರ್ಮದವರು. ಆದರೆ ಅವರು ಕೆಲಸ ಅರಸಿ, ಭಾರತಕ್ಕೆ ಬಂದು, ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕೆಲ ಸಮಯ ಸಲ್ಮಾನ್ ಜತೆ ಅಫೇರ್ ಇತ್ತು. ಬಳಿಕ ಬ್ರೇಕಪ್‌ ಆಗಿ, ವಿಕಿ ಜತೆ ಸಪ್ತಪದಿ ತುಳಿದಿದ್ದಾರೆ.

ವಿದೇಶಿ ಪ್ರಜೆಯಾಗಿರುವ ಕತ್ರೀನಾ ನಮ್ಮ ತುಳುನಾಡ ಕಾರ್ಣಿಕ ದೈವ ಕೊರಗಜ್ಜನ ಭಕ್ತೆ. ಆಕೆ ಕೆಲ ತಿಂಗಳ ಹಿಂದೆ ಕ್ರಿಕೇಟಿಕ ಕೆ.ಎಲ್.ರಾಹುಲ್ ಜತೆ ಬಂದು, ಕುತ್ತಾರಿನಲ್ಲಿ ಕೋಲ ಸೇವೆ ಮಾಡಿಸಿದ್ದರು.

About The Author