Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ದೇಶಭಕ್ತಿ ಸಿನಿಮಾ ಆಗಿದೆ. ಭಾರತದಿಂದ ಪಾಕಿಸ್ತಾನಕ್ಕೆ ಗೂಢಾಚಾರಿಯಾಗಿ ಹೋಗುವ ವ್ಯಕ್ತಿ, ಯಾವ ರೀತಿಯಲ್ಲಿ ತನ್ನ ಸತ್ಯವನ್ನು ಮರೆಮಾಚಿ, ಪಾಕಿಸ್ತಾನಿಯಂತೆ ಇದ್ದು, ಅಲ್ಲಿನ ಭಯೋತ್ಪಾದಕರಿಗೆ ಚಳ್ಳೆ ಹಣ್ಣು ತಿನ್ನಿಸಿ, ಗೆದ್ದು ಬರುತ್ತಾನೆ ಅನ್ನೋ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ.

ಈ ಸಿನಿಮಾ ಪಾಕಿಸ್ತಾನದ ವಿರುದ್ಧ ಇರುವ ಕಾರಣ, ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ಅಲ್ಲಿನ ಜನರಿಗೆ  ತಮ್ಮ ವಿರುದ್ಧ ಇರುವ ಸಿನಿಮಾ ನೋಡೋಕ್ಕೆ ಅದೇನ್ ಇಂಟ್ರೆಸ್ಟೋ ಏನೋ.. ಪೈರಸಿ ಆಗಿರುವ ಸಿನಿಮಾವನ್ನು ಮುಗಿಬಿದ್ದು ನೋಡ್ತಿದ್ದಾರೆ.

ಈ ಸಿನಿಮಾ ಎಫೆಕ್ಟ್ ಯಾವುದರ ಮಟ್ಟಿಗೆ ಪಾಕಿಸ್ತಾನದಲ್ಲಿ ತಟ್ಟಿದೆ ಅಂದ್ರೆ, ಅಲ್ಲಿನ ಗಲ್ಲಿ ಗಲ್ಲಿಗೆ ಹೋಗಿ, ಕೆಲವರು ಎಲ್ಲರ ಐಡಿ ಪ್ರೂಫ್ ಚೆಕ್ ಮಾಡಿ, ಭಾರತದ ಗೂಢಾಚಾರಿ ಯಾರಾಾದ್ರೂ ಇದ್ದಾರಾ ಅಂತಾ ಚೆಕ್ ಮಾಡೋ ರೀತಿ ವೀಡಿಯೋ ವೈರಲ್ ಆಗಿದೆ. ಧುರಂಧರ್ 2 ಸಿನಿಮಾ ಎಫೆಕ್ಟ್ ನಿಂದ ಪಾಕಿಸ್ತಾನದಲ್ಲಿ ಜನರ ಐಡಿ ಪ್ರೂಫ್ ಚೆಕ್ ಮಾಡಲಾಗುತ್ತಿದೆ ಅಂತಾ ವೀಡಿಯೋ ವೈರಲ್ ಮಾಡಲಾಗುತ್ತಿದೆ.

ಆದರೆ ಈ ರೀತಿ ಚೆಕಿಂಗ್ ಪ್ರತೀ ವರ್ಷವೂ ಆಗುತ್ತಿದ್ದು, ಇದಕ್ಕೂ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳಲಾಗುತ್ತಿದೆ.

About The Author