Bollywood: ಕೆನಡಾದಲ್ಲಿರುವ ಬಾಲಿವುಡ್ ನಟ ಹಾಸ್ಯಗಾರ ಕಪಿಲ್ ಶರ್ಮಾಗೆ ಸಂಬಂಧಿಸಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿ, ಕೆಫೆ ಧ್ವಂಸ ಮಾಡಿದ್ದಾರೆ.
ಕಪಿಲ್ ಶರ್ಮಾ ಕೆನಡಾದಲ್ಲಿ ಇತ್ತೀಚೆಗೆ ಕ್ಯಾಪ್ಸ್ ಕೆಫೆ ಎಂಬ ಕೆಫೆ ಓಪನ್ ಮಾಡಿದ್ದರು. ಆದರೆ ಕೆನಡಾದಲ್ಲಿ ಭಾರತೀಯರ ಮೇಲೆ ಗೂಂಡಾಗಿರಿ ಹೆಚ್ಚಾಗಿದ್ದು, ಕಪಿಲ್‌ಗೆ ಸೇರಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್, ಕಾಫಿ ಜತೆ ಹರಟುತ್ತ ಸಂತೋಷ ಪಡಲಿ ಎಂದು ನಾನು ಕ್ಯಾಪ್ಸ್ ಕಾಫಿ ತೆರೆದಿದ್ದೆ. ಆದರೆ ಹೀಗಾಗಿದೆ. ನಾನು ಇದರಿಂದ ಶಾಕ್ ಆಗಿದ್ದೇನೆ. ಆದರೆ ಆದಷ್ಟು ಬೇಗ ಧೃತಿಗೆಡದೇ ನಾವು ಕೆಫೆಯನ್ನು ಮುಂಚೆಯಂತೆ ಮಾಡೋಣವೆಂದು ಕಪಿಲ್ ಹೇಳಿದ್ದಾರೆ.
ಅಲ್ಲದೇ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸದಿಂದಲೇ ಕ್ಯಾಪ್ಸ್ ಕೆಫೆ ನಿಂತಿದೆ. ಈ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಖಲಿಸ್ತಾನಿ ಉಗ್ರರು 9 ಬಾರಿ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂಬ ಸುದ್ದಿ ಇದೆ. ನಾವು ಮತ್ತೆ ಕೆಫೆಯನ್ನು ಮುಂಚಿನಂತೆ ಮಾಡುತ್ತೇವೆ ಎಂದು ಕಪಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದಿಯಲ್ಲಿ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎಂದು ಕಪಿಲ್ ಶೋ ಶುರು ಮಾಡಿದಾಗ, ಈ ಶೋ ಫ್ಲಾಪ್ ಆಗುತ್ತದೆ ಎಂದೇ ಹಲವರು ಭಾವಿಸಿದ್ದರು. ಆದರೆ ಕಪಿಲ್ ಶೋವನ್ನು ಯಾವ ರೇಂಜ್‌ಗೆ ತೆಗೆದುಕ“ಂಡು ಹೋಗಿದ್ದಾರೆಂದರೆ, ಇವರ ಕಾರ್ಯಕ್ರಮಕ್ಕೆ ಭಾರತ ಚಿತ್ರರಂಗದ ಎಲ್ಲ ದಿಗ್ಗಜರು ಬಂದಿದ್ದಾರೆ. ಕನ್ನಡದಿಂದ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇವರ ಕಾರ್ಯಕ್ರಮಕ್ಕೆ ಹೋಗಿದ್ದರು.
ಬಾಲಿವುಡ್‌ನ ಸಲ್ಮಾನ್, ಶಾರುಖ್ ಸೇರಿ ಹಲವು ಘಟಾನುಘಟಿಗಳು ಇವರ ಕಾರ್ಯಕ್ರಮಕ್ಕೆ ಬಂದಿದ್ದರು. ಕೋಟಿ ಕೋಟಿ ಆಸ್ತಿ ಇರುವ ಕಪಿಲ್ ಈಗಲೂ ಆ ಶೋ ನಡೆಸುತ್ತಿದ್ದು ದಿ ಕಪಿಲ್ ಶರ್ಮಾ ಶೋ ಅಂತಲೇ ಕಾರ್ಯಕ್ರಮ ಫೇಮಸ್ ಆಗಿದೆ.
ಿಗಳ