Sunday, December 22, 2024

Latest Posts

ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್ ಹೀರೋ..!

- Advertisement -

ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಬನಾರಸ್ ಎಲ್ಲ ಭಾಷೆಗಳ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಕನ್ನಡದ ಪ್ರೇಕ್ಷಕರಂತೂ ಝೈದ್ ಖಾನ್ ನಟನೆ ಕಂಡು ಭೇಷ್ ಅಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಪಳಗಿದ ನಟನಂತೆ ನಟಿಸಿರೋ ಝೈದ್ ಖಾನ್ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಝೈದ್ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮುಖ್ಯ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರೆ ಎಂಬ ನಂಬಿಕೆಯೂ ಬಲಗೊಂಡಿದೆ.

ಆದರೆ ಇದೀಗ ಝೈದ್ ಖಾನ್ ಅವರಿಗೆ ಬಾಲಿವುಡ್ ನಿಂದ ಬಿಗ್ ಆಫರ್ ಒಂದು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೊಬ್ಬರು ಝೈದ್ ಗೆ ಒಂದೊಳ್ಳೆ ಕಥೆ ತಂದಿದ್ದಾರೆ. ದೊಡ್ಡ ಬಜೆಟ್ಟಿನ ಚಿತ್ರದ ಆಫರ್ ಗಾಗಿ ನಿರ್ದೇಶಕ ಝೈದ್ ಅವರನ್ನು ಸಂಪರ್ಕಿಸಿದ್ಧಾರೆ. ಆದರೆ ಝೈದ್ ಅದನ್ನು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವಾಗಿರೋದು ಅವರೊಳಗಿರುವ ಕನ್ನಡ ಪ್ರೇಮ!

ಝೈದ್ ಖಾನ್‍ರನ್ನು ಸಂಪರ್ಕಿಸಿದ್ದ ಆ ನಿರ್ದೇಶಕರು ವಿವರಿಸಿದ್ದೆಲ್ಲವೂ ಝೈದ್‍ಗೆ ಇಷ್ಟವಾಗಿತ್ತು. ಆದರೆ ಆ ಚಿತ್ರ ಹಿಂದಿಯಲ್ಲಿ ಮಾತ್ರವೇ ತಯಾರಾಗುತ್ತದೆಂಬ ವಿಚಾರ ಮಾತ್ರ ಝೈದ್ ಅವರಿಗೆ ಹಿಡಿಸಿರಲಿಲ್ಲ. ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಯಾರು ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಆ ಕಡೆಯಿಂದ ಒಪ್ಪಿಗೆ ಬಂದಿರಲಿಲ್ಲ. ಆಗ ಝೈದ್ ಖಾನ್ ‘ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಚಿತ್ರ’. ಅದು ಪ್ರಧಾನವಾಗಿ ತಯಾರಾಗಿರೋದು, ಗೆದ್ದಿರೋದು ಕನ್ನಡಿಗರಿಂದಲೇ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ.’ ಎಂಬಂಥಾ ನಿಖರ ಉತ್ತರ ನೀಡಿ ಆ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ. ಝೈದ್ ಖಾನ್ ಕನ್ನಡಪ್ರೇಮವನ್ನು, ಕನ್ನಡ ಚಿತ್ರರಂಗದ ಮೇಲೆ ಅವರಿಟ್ಟಿರುವ ಅಭಿಮಾನವನ್ನು ಮೆಚ್ಚಿಕೊಳ್ಳಲೇಬೇಕಿದೆ.

- Advertisement -

Latest Posts

Don't Miss