Bollywood News: ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪದೇ ಪದೇ ವಿವಾದಕ್ಕೆ ಸಿಲುಕುತ್ತಿದ್ದಾರೆ. ಈ ಹಿಂದೆ ದೆಹಲಿಯ ನೆಹರು ಕಾಲೇಜು ವಿದ್ಯಾರ್ಥಿಗಳಿಗೆ ಬೆಂಬಲಿಸಿ, ಕೇಸರಿ ಕಲಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಸಿನಿಮಾವನ್ನು ಯಾವ ಹಿಂದೂಗಳು ನೋಡಬಾರದು ಅಂತಾ ಪ್ರತಿಭಟಿಸಲಾಗಿತ್ತು. ಇದೀಗ ಮತ್ತೆ ದೀಪಿಕಾ ವಿವಾದಕ್ಕೆ ಸಿಲುಕುವ ಎಲ್ಲ ಲಕ್ಷಣಗಳು ಕಾಣುತ್ತಿದೆ.
ಅಬುದಾಬಿ ಪ್ರವಾಾಸದ ಜಾಹೀರಾತಿಗಾಗಿ ದೀಪಿಕಾ ಹಿಜಬ್ ಧರಿಸಿದ್ದಾರೆ. ಪತಿ ರಣ್ವೀರ್ ಸಿಂಗ್ ಜತೆ ಜಾಹೀರಾತಿನಲ್ಲಿ ಕಾಣಿಸಿಕ“ಂಡಿರುವ ದೀಪಿಕಾ, ಅಬುದಾಬಿಯ ಸಂಸ್ಕೃತಿಯಂತೆ ಹಿಜಬ್ ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಇದನ್ನು ವಿರೋಧಿಸಿದ್ದಾರೆ.
ಆದರೆ ದೀಪಿಕಾ ಅಭಿಮಾನಿಗಳು ದೀಪಿಕಾ ಮಾಡಿದ್ದರಲ್ಲಿ ಏನೂ ತಪ್ಪಿಲ್ಲ ಎಂದಿದ್ದಾರೆ. ಅಂದರೆ ನಾವು ಹೇಗೆ ಭಾರತಕ್ಕೆ ಬಂದಾಗ, ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಶಿಸ್ತಿನಿಂದ ನಮ್ಮ ಭಾರತೀಯ ದಿರಿಸು ಧರಿಸಬೇಕು ಎಂದು ಬಯಸುತ್ತೇವೋ ಅದೇ ರೀತಿ ಆ ದೇಶದವರಿಗೂ ತಮ್ಮ ಸಂಸ್ಕೃತಿಯನ್ನೇ ಪ್ರವಾಸಿಗರು ಫಾಲೋ ಮಾಡಬೇಕು ಎಂದಿರುತ್ತದೆ. ಹಾಗಾಗಿ ದೀಪಿಕಾ ಮಾಡಿದ್ದಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾರೆ.
ಅವರು ಅಬುದಾಬಿಯ ಮಸೀದಿಯಲ್ಲಿ ಇರುವ ಕಾರಣ ದೀಪಿಕಾ ಆ ರೀತಿ ಉಡುಪು ಧರಿಸಲೇಬೇಕು. ಇದರಲ್ಲೂ ತಪ್ಪು ಹುಡುಕಬೇಡಿ. ಅದು ಅಲ್ಲಿನ ನಿಯಮ ಮತ್ತು ನಂಬಿಕೆ ಎಂದು ಇನ್ನೋರ್ವ ಅಭಿಮಾನಿ ಹೇಳಿದ್ದಾರೆ. ಅಲ್ಲದೇ ದೀಪಿಕಾ ಬೇರೆ ದೇಶಕ್ಕೆ ಹೋದರೂ, ಗೌರವಯುತವಾದ ಉಡುಪನ್ನೇ ಧರಿಸಿದ್ದಾರೆಂದು ಇನ್ನು ಕೆಲವರು ನೆಚ್ಚಿನ ನಟಿಯನ್ನು ಸಮರ್ಥಿಸಿಕ“ಂಡಿದ್ದಾರೆ.