Sunday, September 8, 2024

Latest Posts

Bollywood News: ಕಾಂಟ್ಯಾಕ್ಟ್ ಲೆನ್ಸ್ ಧರಿಸಿ, ಕಣ್ಣು ಕಳೆದುಕೊಳ್ಳುವ ಸ್ಥಿತಿಗೆ ಬಂದ ನಟಿ

- Advertisement -

Bollywood News: ಇತ್ತೀಚೆಗೆ ಫ್ಯಾಷನ್ ಅನ್ನೋದು ಜೀವನದ ಒಂದು ಭಾಗವಾಗಿದೆ. ಸಾಮಾನ್ಯ ಜನರಿಗೆ ಹೀಗೆ ಆಗಿರುವಾಗ, ಇನ್ನು ಸೆಲೆಬ್ರಿಟಿಗಳ ಬಗ್ಗೆ ಕೇಳಬೇಕಾ..? ಅದರಲ್ಲೂ ಬಾಲಿವುಡ್ ನಟ ನಟಿಯರಿಗೆ ಫ್ಯಾಷನ್ ಅನ್ನೋದು ಬೇಕೇ ಬೇಕಾಗಿರುವ ಭಾಗ.

ಫ್ಯಾಷನ್ ಮಾಡದೇ, ಸಿಂಪಲ್ ಆಗಿದ್ದರೆ, ಅಂಥವರನ್ನು ಅಲ್ಲಿ ತಿರುಗಿ ನೋಡುವುದಿಲ್ಲ. ಹಾಗಾಗಿಯೇ ಕೆಲ ನಟಿಯರು ತುಂಡುಡುಗೆ ತೊಟ್ಟಾದರೂ ಬಾಲಿವುಡ್‌ ಭಾಗವಾಗಬೇಕು ಅಂತಾ ಹೋಗ್ತಾರೆ. ಇನ್ನು ಮುಖಕ್ಕೆ ಮೇಕಪ್ ಹಾಕದೇ, ಹೋದರೆ, ಅಂಥವರನ್ನು ಗುರುತು ಹಿಡಿಯುವುದೇ ಕಷ್ಟ.

ಹಾಗಾಗಿ ಈ ಬಾಲಿವುಡ್ ನಟಿ ಕೂಡ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ, ಮುಖದ ತುಂಬ ಮೇಕಪ್ ಮಾಡಿಕೊಂಡು ಹೋಗಿದ್ದಲ್ಲದೇ, ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಹೋಗಿದ್ದರು. ಆದರೆ ಕೆಲ ಹೊತ್ತಿನಲ್ಲೇ ಕಣ್ಣು ಉರಿಯಲು ಶುರುವಾಯಿತು. ಬಳಿಕ ಕಣ್ಣು ಉರಿ ಎಷ್ಟರ ಮಟ್ಟಿಗೆ ಹೆಚ್ಚಾಯಿತೆಂದರೆ, ಆಸ್ಪತ್ರೆಗೆ ಹೋದಾಗ, ನೀವು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದೀರಿ ಅಂತಾ ಹೇಳುವಷ್ಟು.

ಬಾಲಿವುಡ್ ನಟಿ ಜಾಸ್ಮಿನ್ ಭಾಸಿನ್ ಈ ರೀತಿಯ ಎಡವಟ್ಟು ಮಾಡಿಕೊಂಡಿದ್ದು, ವೈದ್ಯರು ಈಕೆಯ ಕಣ್ಣಿನ ಕಾರ್ನಿಯಲ್‌ಗೆ ಪೆಟ್ಟು ಬಿದ್ದಿದೆ ಎಂದಿದ್ದಾರೆ. ಅಲ್ಲದೇ, ಈಕೆಯ ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿದೆ. ಈಗೀಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಾರೆ.

ಇನ್ನು ಕೆಲ ಸಮಯಕ್ಕೂ ಮುನ್ನ ಇನ್‌ಸ್ಟಾನಲ್ಲಿ ಬರೆದುಕೊಂಡಿರುವ ನಟಿ, ತಮ್ಮ ಬಾಯ್‌ಫ್ರೆಂಡ್ ಅಲೈ ಗೋನಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ನನ್ನ ಕಣ್ಣಿನ ಆರೋಗ್ಯ ಸಿಕ್ಕಾಪಟ್ಟೆ ಹದಗೆಟ್ಟಿದ್ದು, ಈ ವೇಳೆ ನನ್ನೊಂದಿಗೆ ಇದ್ದು, ನನ್ನ ಯೋಗಕ್ಷೇಮ ನೋಡಿಕೊಂಡಿದ್ದಲ್ಲದೇ, ನನ್ನ ಕಣ್ಣಾಗಿ ನನ್ನ ಜೊತೆ ಇದ್ದಿದ್ದಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss