Bollywood News: ಸದ್ಯ ಕರ್ನಾಟಕದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಸು ಫ್ರಮ್ ಸೋ. ರಾಜ್.ಬಿ.ಶೆಟ್ಟಿ ನಿರ್ಮಾಣ ಮತ್ತು ಜೆ.ಪಿ.ತುಮ್ಮಿನಾಡ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ನಗುವಿನ ಅಲೆಯೇ ಇದೆ. ದಕ್ಷಿಣ ಕನ್ನಡದ ಸೋಮೇಶ್ವರ ಅನ್ನುವ ಊರಿನಲ್ಲಿ ನಡೆಯುವ ಘಟನೆಗೆ ಹಾಸ್ಯ ಮಿಶ್ರಿತ್ ಟಚ್ ನೀಡಿ, ಈ ಸಿನಿಮಾ ಮಾಡಲಾಗಿದೆ.
ಈ ಸಿನಿಮಾ ಬರೀ ಕನ್ನಡದಲ್ಲಿ ಮಾತ್ರವಲ್ಲದೇ, ಮಲಯಾಳಂ, ತೆಲುಗು, ಹಿಂದಿಯಲ್ಲೂ ಸದ್ದು ಮಾಡಿದೆ. ಈ ಸಿನಿಮಾವನ್ನು ನೋಡಿ ಮೆಚ್ಚಿರುವ ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ಜೆ.ಪಿ.ತುಮ್ಮಿನಾಡ್ ಅವರನ್ನು ಕರೆಸಿ, ಮೂವಿ ಚೆನ್ನಾಗಿದೆ. ನಾವು ಅವಕಾಶ ಸಿಕ್ಕಾಗ ಜತೆಗೆ ಕೆಲಸ ಮಾಡೋಣ ಎಂದಿದ್ದಾರೆ. ಅಲ್ಲದೇ, ಕಿಚ್ಚ ಸುದೀಪ್ ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಮಾಪಕ, ನಿರ್ದೇಶಕ, ನಟ ರಾಜ್.ಬಿ.ಶೆಟ್ಟಿ ಅವರನ್ನು ಹೈವಾನ್ ಸೆಟ್‌ನಲ್ಲಿ ಭೇಟಿಯಾಗಿ, ಅಭಿನಂದನೆ ಸಲ್ಲಿಸಿದ್ದಾರೆ. ಮೂವಿ ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಕಥೆ ಅದ್ದರೆ ಹೇಳಿ, ಸಿನಿಮಾ ಮಾಡೋಣವೆಂದು ಬಾಲಿವುಡ್‌ಗೆ ಆಫರ್ ನೀಡಿದ್ದಾರೆ.