film story
ಹೆಣ್ಣು ಎಷ್ಟು ಶ್ರೀ ಮಂತವಾಗಿದ್ದರೆನು, ಎಷ್ಟು ಧೈರ್ಯವಿದ್ದರೇನು ಒಂದು ಗಂಡಿನ ಬುಜ ಎಷ್ಟು ಮುಖ್ಯವೆಂದು ಈ ಕಥೆಯಿಂದ ತಿಳಿಯುತ್ತದೆ. ಅದಕ್ಕೆ ಗಂಡನಾದವನು ಹೆಂಡತಿಯನ್ನು ಸಹ ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು.ಹುಡುಹಿ ಹತ್ತರವಿರುವ ಆಸ್ತಿಯ ಆಸೆಗೆ ಅವಳನ್ನು ಪ್ರೀತಿಸುವ ನಾಟಕವಾಡಿ ನತರ ಅವಳಿಗೆ ಮೋಸ ಮಾಡುವುದು ಸರಿಯಲ್ಲ.ಇದೆ ರೀತಿಯ ಘಟನೆಯೊಂದು ಬಾಲಿವುಡ್ ನಟಿಯ ಬಾಳಲ್ಲಿ ಸಂಭವಿಸಿದೆ.
ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ ಇಂದು ಮೈಸೂರಿನ ಕೋರ್ಟ್ ಗೆ ಹಾಜರಾಗಿದ್ದು, ಈ ವೇಳೆ ನಾನೂ ಕೂಡ ಫ್ರಿಡ್ಜ್ ನಲ್ಲಿ ಹೆಣವಾಗಬೇಕಿತ್ತು.. ಆದರೆ ದೇವದ ದಯೆಯಿಂದ ಪಾರಾದೆ ಎಂದು ಹೇಳಿಕೆ ನೀಡಿದ್ದಾರೆ.
#Bollywood actress #RakhiSawant breaks down in Mysuru Court Premises..She and her friend #SherlynChopra had come to support the Iranian girl who has filed rape case against #AdilKhanDurrani ,husband of Rakhi. Rakhi said family of Adil,is not accepting her,where should she go now. pic.twitter.com/0MbbgInIJM
— Yasir Mushtaq (@path2shah) February 22, 2023
ಪತಿ ಅದಿಲ್ ಜೊತೆಗಿನ ವಿವಾಹ ಮತ್ತು ಆ ಬಳಿಕದ ವಿವಾದಗಳಿಂದ ಸುದ್ದಿಗೆ ಗ್ರಾಸವಾಗುತ್ತಿರುವ ನಟಿ ರಾಖಿ ಸಾವಂತ್ ಇಂದು ಮೈಸೂರು ಕೋರ್ಟ್ ಗೆ ಹಾಜರಾದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು.. ಆದಿಲ್ ನನ್ನನ್ನು ಯಾಕೆ ಪ್ರೀತಿಸಿದ ಎಂದು ಈಗ ಗೊತ್ತಾಗಿದೆ. ಅವನ ಉದ್ದೇಶ ನನ್ನನ್ನು ಕೊಂದು ನನ್ನ ಹೆಣವನ್ನು ಫ್ರಿಡ್ಜ್ ನಲ್ಲಿ ತುಂಬುವುದೇ ಆಗಿತ್ತು. ದೇವರು ದೊಡ್ಡವನು ನನ್ನನ್ನು ಹಾಗೆ ಆಗಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.