Bollywood: ಹಣಕ್ಕಾಗಿ ಇಂಥ ಕೆಲಸ ಮಾಡಬೇಕೇ..?: ಯಾರ ವಿರುದ್ಧ ಗರಂ ಆದ್ರೂ ನಟಿ ಜಾನ್ವಿ ಕಪೂರ್..?

Bollywood: ಬಾಲಿವುಡ್ ನಟಿ ಜಾನ್ವಿ ಕಪೂರ್ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ಕೆಲ ಪಾಪರಾಜಿಗಳು ಹಣಕ್ಕಾಗಿ ಇಂಥ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿರುವ ಅವರು, ಕಿಡಿಕಾರಿದ್ದಾರೆ.

ಪಾಪರಾಜಿಗಳ ವಿರುದ್ಧ ಜಾನ್ವಿ ಕೋಪಗ“ಳ್ಳಲು ಕಾರಣವೂ ಇದೆ. ರೀಲ್ಸ್ ಹಾಕುವ ನೆಪದಲ್ಲಿ ಹೆಚ್ಚು ವೀವ್ಸ್ ಬರಲಿ ಎಂದು, ನಟಿಯರ ಖಾಸಗಿ ಅಂಗವನ್ನು ಜೂಮ್ ಮಾಡಿ ತೋರಿಸಲಾಗುತ್ತದೆ. ಇಂಥ ಕೆಲಸದ ಬಗ್ಗೆ ಜಾನ್ವಿ ಕಿಡಿಕಾರಿದ್ದು, ಟ್ರೋಲ್ ಮಾಡುವವರು, ಕೆಲ ಪಾಪರಾಜಿಗಳ ವಿರುದ್ಧ ಜಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಪರಾಜಿಗಳು ಹೆಚ್ಚಾಗಿ ಸೆಲೆಬ್ರಿಟಿಗಳ ಜಿಮ್ ಆಚೆ ನಿಂತು, ಅವರು ನಡೆಯುವ ರೀತಿ, ಅವರ ದೈಹಿಕ ಸೌಂದರ್ಯ, ಅವರು ಧರಿಸುವ ಉಡುಗೆ ಎಲ್ಲವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಬಳಿಕ, ಅವರ ಖಾಸಗಿ ಭಾಗವನ್ನು ಜೂಮ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಹೆಚ್ಚು ವೀವ್ಸ್ ಬಂದರೆ, ಹೆಚ್ಚು ಹಣವೂ ಬರುತ್ತದೆ ಅನ್ನೋ ಕಾರಣಕ್ಕೇ ಹೀಗೆ ಮಾಡೋದು ಅಂತಾ ಎಲ್ಲರಿಗೂ ತಿಳಿದಿದೆ.

ಈ ಬಗ್ಗೆ ಜಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದು, ಪಾಪರಾಜಿಗಳ ಎದುರಿಗೆ ಬೈದಿದ್ದಾರೆ. ಫೋಟೋ ತೆಗೆಯುವುದು, ವೀಡಿಯೋ ಮಾಡುವುದು ನಿಮ್ಮ ಕೆಲಸವೆಂದು ತಿಳಿದಿದೆ. ಆದರೆ ಮಹಿಳೆಯರ ವೀಡಿಯೋ, ಫೋಟೋವನ್ನು ನೀವು ತೋರಿಸುವ ರೀತಿ ಸರಿಯಿಲ್ಲ. ನಮ್ಮ ಪರ್ಮಿಷನ್ ಇಲ್ಲದೇ, ನಿಮಗೆ ಮನಸ್ಸಿಗೆ ಬಂದಂತೆ ನಮ್ಮ ಫೋಟೋ ಕ್ಲಿಕ್ಕಿಸಿದರೆ, ನಮ್ಮ ಖಾಸಗಿ ತನದ ಉಲ್ಲಂಘನೆ ಮಾಡಿದಂತೆ ಎಂದು ಜಾನ್ವಿ ಗರಂ ಆಗಿದ್ದಾರೆ. ಇನ್ನು ಬಾಲಿವುಡ್‌ನ ಹಲವು ನಟಿಯರು ಈಕೆಯ ಮಾತು ಸರಿ ಎಂದು ಬೆಂಬಲಿಸಿದ್ದಾರೆ.

About The Author