ಮೈಸೂರು: ಗಡಿ ವಿವಾದ ವಿಚಾರವಾಗಿ ಎರಡು ರಾಜ್ಯಗಳ ಸಿಎಂಗಳು ಕೇಂದ್ರ ಗೃಹ ಸಚಿವರ ಭೇಟಿ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಗಡಿ ವಿಚಾರವಾಗಿ ಗೃಹ ಸಚಿವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ.
ಚಾಮರಾಜನಗರಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷತೆ ಏನೂ ಇಲ್ಲ: ಸಿಎಂ ಬೊಮ್ಮಾಯಿ
ನಾವು ನಮ್ಮ ನಿಲುವಿನ ಬಗ್ಗೆ ತಿಳಿಸುತ್ತೇವೆ. ಪ್ರಕರಣ ಕುರಿತ ಸುಪ್ರೀಂ ಕೋರ್ಟ್ ನಲ್ಲಿರುವ ವರದಿ, ಗಡಿ ವಿಚಾರದ ಕಾನೂನು ನಿಯಮಗಳನ್ನ ಗೃಹ ಸಚಿವರ ಮುಂದಿಡುತ್ತೇನೆ. ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ನಾನು ಎಲ್ಲಾ ಸಿದ್ಧತೆ ನಡೆಸಿಯೇ ತೆರಳುತ್ತೇನೆ. ಗೃಹ ಸಚಿವರು ಈ ಬಗ್ಗೆ ಪ್ರಸ್ತಾಪ ಮಾಡಿದರೆ ನಾನು ಚರ್ಚಿಸುತ್ತೇನೆ. ಮೊದಲು ಗಡಿ ವಿಚಾರವಾಗಿ ಚರ್ಚೆ ಮಾಡಲು ಆಹ್ವಾನ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಐಷಾರಾಮಿ ಜೀವನ ನಡೆಸಲು ದೇವಸ್ಥಾನದ ಹುಂಡಿ ಕದಿಯುತ್ತಿದ್ದ ಸರ್ಕಾರಿ ಶಿಕ್ಷಕನ ಬಂಧನ