ಗದಗ : ಗದಗ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ರಟ್ಟಿನ ಡಬ್ಬದಲ್ಲಿ ಮೂರು ದಿನದ ಹಸುಗೂಸನ್ನು ಮುಚ್ಚಿಡಲಾಗಿದೆ. ಬೇವಿನ ಸೊಪ್ಪು, ಕೊಂಬೆಗಳನ್ನು ಅಡಿಯಲ್ಲಿ ಸೇರಿಸಿ ರಟ್ಟಿನ ಡಬ್ಬಿಯಲ್ಲಿ ಮಗುವನ್ನು ಇಟ್ಟಿದ್ದರು. ಮಗು ಅಳುವ ಸದ್ದನ್ನು ಕೇಳಿಸಿಕೊಂಡು ಆಕಾಶ್ ಎಂಬ ವ್ಯಕ್ತಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಕಾನ್ಸ್ ಸ್ಟೇಬಲ್ ಗಳಾದ ಪರುಶುರಾಮ ದೊಡ್ಡಮನಿ, ಅಶೋಕ್ ಬಂದು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?
ಗದಗನ ಸಣ್ಣಮಕ್ಕಳ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿನ ಪೋಷಕರನ್ನು ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದಾರೆ. ಹಸುಗೂಸನ್ನು ಎಸೆದು ಹೋಗಿರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಮಗುವಿನ ಮಾಹಿತಿ ನೀಡಿದ ಯುವಕ ಆಕಾಶ್ ಮತ್ತು ಪೊಲೀಸ್ ಸಿಬ್ಬಂದಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ಖಾಸಗಿ ಆಸ್ಪತ್ರೆಯ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಾಹಿತಿ ನೀಡಿದರು.
ನಿಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಈ 4 ಗುಣವನ್ನು ಮಕ್ಕಳಿಗೆ ಹೇಳಿಕೊಡಿ..