ಭಾರತದಲ್ಲಿ ಹಲವಾರು ರೀತಿಯ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ದೇವಸ್ಥಾನಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಕೂಡ ಒಂದು ಪದ್ಧತಿ. ಭಾರತದಲ್ಲಿರುವ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಆದ್ರೆ ನಾವಿಂದು ಹೇಳುತ್ತಿರುವ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಹಾಗಾದ್ರೆ ಯಾವುದು ಆ ದೇವಸ್ಥಾನ ಅಂತಾ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಹಲವಾರು ದೇವಸ್ಥಾನಗಳಿದೆ. ಅಂಥಹುದರಲ್ಲಿ ನಾವಿಂದು ಮೂರು ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ರಾಜಸ್ಥಾದ ಬ್ರಹ್ಮದೇವನ ದೇವಾಲಯ. ಬ್ರಹ್ಮನಿಗೆ ಸಂಬಂಧಿಸಿದ ದೇವಸ್ಥಾನವಿರುವುದು ತುಂಬಾ ಅಪರೂಪ. ಇಂಥ ಅಪರೂಪದ ದೇವಸ್ಥಾನಗಳಲ್ಲಿ ರಾಜಸ್ಥಾನದ ಪುಷ್ಕರ ಗಣ್ಯದ ಬಳಿ ಇರುವ ಬ್ರಹ್ಮನ ದೇವಸ್ಥಾನ ಕೂಡ ಒಂದು.
ಈ ದೇವಸ್ಥಾನಕ್ಕೆ ಪುರುಷರು ಆಗಮಿಸುತ್ತಾರೆ. ಆದ್ರೆ ಮದುವೆಯಾದ ಪುರುಷರಿಗೆ ಮಾತ್ರ ಈ ದೇವಸ್ಥಾನದಲ್ಲಿ ಬರಲು ಅವಕಾಶವಿದೆ. ಮದುವೆಯಾಗದವರು ಈ ದೇವಸ್ಥಾನಕ್ಕೆ ಆಗಮಿಸುವಂತಿಲ್ಲ. ಯಾಕಂದರೆ ಪುರಾಣ ಕಥೆಗಳ ಪ್ರಕಾರ ಬ್ರಹ್ಮ ಈ ಸ್ಥಳದಲ್ಲಿ ಮಹಾಯಾಗವನ್ನು ಆಯೋಜಿಸಿರುತ್ತಾನೆ. ಈ ಯಾಗದಲ್ಲಿ ಪತಿ ಪತ್ನಿ ಇಬ್ಬರೂ ಪಾಲ್ಗೊಳ್ಳಬೇಕು. ಆದ್ರೆ ಸರಸ್ವತಿ ಬರುವುದು ತಡವಾದ ಕಾರಣ, ಬ್ರಹ್ಮ ಗಾಯತ್ರಿಯನ್ನು ಮದುವೆಯಾಗಿ ಯಾಗಕ್ಕೆ ಕೂರುತ್ತಾನೆ. ಈ ಕಾರಣಕ್ಕೆ ಸಿಟ್ಟಾದ ಸರಸ್ವತಿ ಶಾಪ ನೀಡುತ್ತಾಳೆ. ಹಾಗಾಗಿ ಸರಸ್ವತಿಯ ಶಾಪದ ಕಾರಣ ಈ ದೇವಸ್ಥಾನಕ್ಕೆ ಬ್ರಹ್ಮಚಾರಿಗಳಿಗೆ ಪ್ರವೇಶ ನಿಶೇಧವೆನ್ನಲಾಗಿದೆ.
ಇನ್ನು ಎರಡನೇಯದಾಗಿ ಕೇರಳದ ಅಟ್ಟುಕಲ್‌ನಲ್ಲಿರುವ ಭಗವತಿ ದೇವಸ್ಥಾನ. ಶಬರಿ ಮಲೆಯಲ್ಲಿ ಹೇಗೆ ಮಹಿಳೆಯರಿಗೆ ಪ್ರವೇಶ ನಿಷೇಧವೋ, ಅದೇ ರೀತಿ ಈ ಭಗವತಿ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶ ನಿಷೇಧ. ಹಾಗಾಗಿ ಇದನ್ನು ಮಹಿಳೆಯರ ಶಬರಿ ಮಲೈ ದೇವಸ್ಥಾನವೆಂದು ಕರೆಯುತ್ತಾರೆ. ಇಲ್ಲಿ ನಡೆಯುವ ಪೊಂಗಲ್ ಹಬ್ಬದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ, ಪೊಂಗಲ್ ತಯಾರಿಸುತ್ತಾರೆ.
ಮೂರನೇಯದಾಗಿ ಕನ್ಯಾಕುಮಾರಿ ದೇವಸ್ಥಾನ. ಇಲ್ಲಿ ಪಾರ್ವತಿ ಶಿವನನ್ನು ವಿವಾಹವಾಗಲು ತಪಸ್ಸು ಮಾಡಿದ್ದಳಂತೆ. ಈಕೆ ಕನ್ಯೆಯಾಗಿ ತಪಸ್ಸು ಮಾಡಿದ್ದ ಕಾರಣಕ್ಕೆ, ಈ ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶವಿಲ್ಲವೆಂದು ಹೇಳಲಾಗಿದೆ. ಕನ್ಯಾ ಮತ್ತು ಭಗವತಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




