ಮದುವೆ ನಿಶ್ಚಯವಾದ ಹುಡುಗ ಓದಿಲ್ಲವೆಂದು ತಿಳಿದ ನಂತರ ಮದುವೆ ರದ್ದಾಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಸುಮಾರು 15 ದಿನಗಳ ಹಿಂದೆ ಹಾಸನ ಜಿಲ್ಲೆಯ ಯುವಕನ ಜೊತೆ, ಮದುವೆ ನಿಶ್ಚಯಗೊಂಡಿತ್ತು. ಮದುವೆಗೂ ಮುನ್ನ ತಾನು ಡಿಗ್ರಿ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹುಡುಗಿ ಮನೆಯವರಿಗೆ ಹೇಳಿದ್ದನು. ಎಂಗೇಜ್ಮೆಂಟ್ ಆದ ನಂತರ ಹುಡಗನ ಪೂರ್ವಾಪರ ವಿಚಾರಿಸಿದಾಗ ಹುಡುಗ ಡಿಗ್ರಿ ಮಾಡದೇ, ತಂದೆಯ ಸೆಕ್ಯೂರಿಟಿ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಹುಡುಗಿಯ ಕುಟುಂಬದವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ.
ಈ ನಿರ್ಧಾರದಿಂದ ಮನನೊಂದು ಕಾವ್ಯ, ಕೆಲಸ ಮಾಡುತ್ತಿದ್ದ ಕಿಕ್ಕೇರಿ ರೈತ ಸಂಪರ್ಕ ಕೇಂದ್ರದಲ್ಲೇ ನಿನ್ನೆ ನಿದ್ರೆ ಮಾತ್ರೆ ಸೇವಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಕಾವಾಳ್ಯನ್ನು ತಕ್ಷಣವೇ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯ ಕನಸು ನನಸಾಗುವ ಮುನ್ನವೇ. ಯುವತಿಯ ಸಾವಿನೊಂದಿಗೆ ಕೊನೆಯಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

