ಹಾಸನ: ಚನ್ನರಾಯಪಟ್ಟಣದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ಕಾರ್ಯಕ್ರಮ ನಡೆಯಿತು. ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ 66ನೇ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಸಕ ಸಿ.ಎನ್ ಬಾಲಕೃಷ್ಣ ಅವರು ಮಾತನಾಡಿದರು. ಅಂಬೇಡ್ಕರ್ ಅವರು ತಮ್ಮ ಜೀವಿತದ ಅವಧಿಯಲ್ಲಿ ಶೋಷಿತ ಸಮುದಾಯದ ಹಿತಕ್ಕಾಗಿ ಹಾಗೂ ಏಳಿಗೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಇಂತಹ ಮಹಾನ್ ನಾಯಕನ ತ್ಯಾಗದಿಂದ ನಾವೆಲ್ಲರೂ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ ಎಂದರು.
ಕುಡಿಯುವ ನೀರಿನ ಬಾವಿಯಲ್ಲಿ ಡಿಸೇಲ್ ಯುಕ್ತ ನೀರು, ಆತಂಕದಲ್ಲಿರುವ ಜನರು
ಧ್ವನಿ ಇಲ್ಲದವರ ಧ್ವನಿಯಾಗಿ ದುಡಿದು ಈ ಸಮಾಜಕ್ಕೆ ಈ ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ, ಮುಂದಿನ 15 ದಿನಗಳ ಒಳಗೆ ತಾಲೂಕು ಕಚೇರಿಯ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ಕಲಾವಿದರಿಗೆ ಮುಂಗಡ ಹಣವನ್ನು ನೀಡಲಾಗುವುದು ಎಂದು ಹೇಳಿದರು.
ಮೂವರು ಯುವಕರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದರ್ಶನ್ ಬಂಧಿಸಿದ ಪೊಲೀಸರು
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ರವೀಂದ್ರ, ಗೋಪಾಲಕೃಷ್ಣ, ಜೆಡಿಎಸ್ ಮುಖಂಡ ತೋಟಿ ನಾಗರಾಜು, ದಲಿತ ಮುಖಂಡರಾದ ಆಲದಹಳ್ಳಿ ವೆಂಕಟೇಶ್, ಸಿ.ಪಿ ಮಂಜುನಾಥ್, ಧರ್ಮಯ್ಯ, ಸಂತೋಷ್, ನುಗ್ಗೆಹಳ್ಳಿ ಆರ್. ಐ.ಲೋಕೇಶ್, ರಾಮು ಸೇರಿದಂತೆ ಇತರರು ಹಾಜರಿದ್ದರು.
ಡಿ.17 ರಂದು ಎನ್ಎಸ್ ಯುಐ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಕಾಲೇಜುಗಳ ಬಂದ್ ಮತ್ತು ಪ್ರತಿಭಟನೆಗೆ ಕರೆ
‘ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸದೆ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ’