Wednesday, September 11, 2024

Latest Posts

ಸ್ತನ ಕ್ಯಾನ್ಸರ್: ತಲೆ ಬೋಳಿಸಿಕೊಳ್ಳುವ ವೀಡಿಯೋ ಹರಿಬಿಟ್ಟ ನಟಿ

- Advertisement -

Bollywood News: ಬಾಲಿವುಡ್ ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಇದ್ದಾಗ, ಚಿಕಿತ್ಸೆ ಪಡೆಯುತ್ತಿದ್ದರೆ, ಕೂದಲು ಕತ್ತರಿಸಬೇಕು. ಇಲ್ಲವಾದಲ್ಲಿ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ, ಸರಿಯಾಗಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಹೀನಾ ಖಾನ್ ತಾನೇ ಕ್ಯಾಮೆರಾ ಎದುರು ತಲೆ ಬೋಳಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ.

ಹೀನಾ ಖಾನ್ ಕಿಮೋ ಥೆರಿಪಿ ತೆಗೆದುಕೊಳ್ಳುತ್ತಿದ್ದಾಗ, ಆಕೆಯ ತಲೆಗೂದಲು ಉದುರಲು ಶುರುವಾಗಿತ್ತು. ಹಾಗಾಗಿ ತಲೆಗೂದಲು ಕತ್ತರಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ಬಾಯ್ ಕಟ್ ಮಾಡಿಸಿದ್ದರು. ಇದೀಗ ಪೂರ್ತಿ ಕೂದಲು ಕತ್ತರಿಸಿದ ವೀಡಿಯೋ ಹರಿಬಿಟ್ಟಿದ್ದಾರೆ.

ಬೆಡ್ ಮೇಲೆ ಸೇರಿದಂತೆ ಅಲ್ಲಲ್ಲಿ ಉದುರಿದ ಕೂದಲು ನೋಡಿ, ನನ್ನ ಆತ್ಮಸ್ಥೈರ್ಯ ಕುಂದಿಹೋಗುತ್ತಿತ್ತು. ಹಾಗಾಗಿ ಪೂರ್ತಿ ಕೂದಲು ಬೋಳಿಸಿಕೊಳ್ಳುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿ, ಹೇರ್ ಟ್ರಿಮ್ಮರ್‌ನಿಂದ ಹೀನಾ ಕೂದಲು ಬೋಳಿಸಿಕೊಂಡಿದ್ದಾರೆ. ಅಗತ್ಯವಿದ್ದಾಗ, ವಿಗ್ ಧರಿಸುತ್ತೇನೆ ಎಂದು ನಟಿ ಹೇಳಿದ್ದಾರೆ.

ಅಲ್ಲದೇ, ಮಹಿಳೆಯರಿಗೆ ಕಿವಿ ಮಾತು ಹೇಳಿರುವ ಹೀನಾ ಖಾನ್, ಮಹಿಳೆಯರೇ ನಮಗೆ ತಾಳ್ಮೆ, ಸಹನೆ, ಧೈರ್ಯ ಮುಖ್ಯವಾಗಿದೆ. ಇಂಥ ಸಮಯದಲ್ಲಿ ನಾವು ಧೈರ್ಯದಿಂದ ಇರಬೇಕು. ಅಲ್ಲಲ್ಲಿ ಉದುರುವ ಕೂದಲು ನಮ್ಮ ಧೈರ್ಯ ಕಡಿಮೆ ಮಾಡಲು ಕಾರಣವಾಗಬಹುದು ಎಂದು ಹೀನಾ ಬರೆದುಕೊಂಡಿದ್ದಾರೆ.

ವೀಡಿಯೋ ನೋಡಲು ಈ ಲಿಂಕ್ ಪ್ರೆಸ್ ಮಾಡಿ

- Advertisement -

Latest Posts

Don't Miss