ರಾಜಸ್ಥಾನ: ಜೈಪುರದ ಬಿಲ್ವಾರದಲ್ಲಿ ಈ ಘಟನೆ ಸಂಭವಿಸಿದ್ದು ಕಳೆದ ಕೆಲವು ದಿನಗಳ ಹಿಂದೆ ತಾಯಿ ಮತ್ತು ಮಗಳು ಗುಡ್ಡದಲ್ಲಿ ಮೇಕೆಗಳನ್ನು ಮೇಯಿಸಲು ಹೋಗಿದ್ದಾಗ ತಾಯಿ ಮತ್ತು ಮಗಳು ಬೇರೆ ಬೇರೆಯಾಗಿದ್ದರು ನಂತರ ಮನೆಗೆ ನಡೆದ ತಾಯಿ ಸಂಜೆಯವರೆಗೂ ಕಾದು ಕುಳಿತು ನಂತರ ಮನೆವರಿಗೆ ವಿಚಾರ ತಿಳಿಸಿದ್ದಾಳೆ ಗ್ರಾಮಸ್ತರ ಜೊತೆ ಸೇರಿ ಬುದುವಾರ ರಾತ್ರಿಯಿಂದ ಗುರುವಾರ ಇಡೀ ದಿನ ಗುಡ್ಡವನ್ನು ಹುಡುಕಾಡಿದ್ದಾರೆ. ಆದರೆ ಇಂದು ಬೆಳಿಗ್ಗೆ(ಆಗಸ್ಟ್ 3) ಮಗಳು ಮನೆಯ ಪಕ್ಕದಲ್ಲಿರುವ ಹೊಲದಲ್ಲಿರುವ ಇಟ್ಟಿಗೆ ಗೂಡಿನಲ್ಲಿ ಸುಟ್ಟು ಕರಕಲಾದ ಸ್ತಿತಿಯಲ್ಲಿ ಪತ್ತೆಯಾಗಿದ್ದಾಳೆ.
ಈ ವಿಚಾರವಾಗ ಠಾಣೆಗೆ ದೂರು ನೀಡಿದರೂ ತಕ್ಷಣ ಸ್ಪಂದಿಸದ ಪೋಲಿಸರು ನಿರ್ಲಕ್ಷ ತೋರಿದ್ದಾರೆ.ನಂತರ ಪೋಲಿಸ್ ವರದಿಯ ಪ್ರಕಾರ ಮಗಳ ಶವವನ್ನು ಸುಡುವ ಮುನ್ನ ಅವಳ ಮೇಲ ಅತ್ಯಾಚಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಭಂದಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಆದರೆ ಗ್ರಾಮಸ್ಥರು ಪೊಲೀಸರ ಕ್ರಮಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದು, ನಮಗೆ ನ್ಯಾಯ ನೀಡಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ನಾವು ದೂರು ನೀಡಿದ ಒಂದು ದಿನದ ನಂತರ ನಮ್ಮ ದೂರಿಗೆ ಸ್ಪಂದಿಸಿದ್ದಾರೆ. ಮಗಳು ನಾಪತ್ತೆಯಾಗಿದ್ದಾಳೆ, ಹುಡುಕಿಕೊಡಿ ಎಂದರೆ ಅವಳ ಗುರುತಿನ ಚೀಟಿ ನೀಡಿ, ಜನನ ಪ್ರಮಾಣ ಪತ್ರ ನೀಡಿ ಎಂದು ಬೇಜಾವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
Gyanavapi: ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈ ಕೋರ್ಟ್