Wednesday, December 3, 2025

Latest Posts

ಶಾರೂಖ್ ಖಾನ್ ನೃತ್ಯಕ್ಕೆ ರೆಸ್ಪಾನ್ಸ್ ನೀಡಿದ ವಧು: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

- Advertisement -

Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್ ಖುಷಿ ಖುಷಿಯಾಗಿ ಡಾನ್ಸ್ ಮಾಡಿದ್ರೂ, ಅಲ್ಲೇ ಇದ್ದ ವಧು ಮಾತ್ರ ಶಾರುಖ್ ಜತೆ 4 ಸ್ಟೆಪ್ ಹಾಕಲು ಹಿಂದು ಮುಂದು ನೋಡಿದ್ದಾಳೆ.

ಶ್ರೀಮಂತರು ತಮ್ಮ ಮದುವೆಯಲ್ಲಿ ಡಾನ್ಸ್ ಮಾಡಲು, ಜನರನ್ನು ಮನರಂಜಿಸಲು ಸಿನಿಮಾ ಸ್ಟಾರ್‌ಗಳನ್ನು ಕರೆಸುತ್ತಾರೆ. ಬಾಲಿವುಡ್ ಸ್ಟಾರ್‌ಗಳಿಗೂ ಕೂಡ ಅಂಥ ಆಮಂತ್ರಣವಿರುತ್ತದೆ. ಕೋಟಿ ಕೋಟಿ ಹಣ ನೀಡಿ, ಅವರನ್ನು ಮದುವೆಯಲ್ಲಿ ಮನರಂಜಿಸಲು ಕರೆಸಿರುತ್ತಾರೆ. ಅವರು ಬಂದು ಕೆಲವು ಗಂಟೆ ವೇದಿಕೆ ಮೇಲೆ ಡಾನ್ಸ್ ಮಾಡಿ, ಮಾತನಾಡಿ, ವಧು ವರ, ಅವರ ಫ್ಯಾಮಿಲಿ ಜತೆ ಫೋಟೋ ನೀಡುತ್ತಾರೆ. ಇಷ್ಟೇ ಕೆಲಸಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.

ಅಂಥದ್ದೇ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಭಾಗಿಯಾಗಿದ್ದರು. ಆದರೆ ಅವರು ವೇದಿಕೆಯಲ್ಲಿ ವಧು-ವರನನ್ನು ಕರೆಸಿ, ನೃತ್ಯ ಮಾಡುತ್ತಿದ್ದರು. ವರ ಸಖತ್ ಎಂಜಾಯ್ ಮಾಡಿ ಡಾನ್ಸ್ ಮಾಡಿದ. ಆದರೆ ವಧು ಮಾತ್ರ ಸುಮ್ಮನೆ ನಿಂತಿದ್ದಳು. ಇದನ್ನು ನೋಡಿದ ಶಾರುಖ್, ನೃತ್ಯ ಮಾಡಲು ಆಕೆಯನ್ನು ಆಹ್ವಾನಿಸಿದರು. ಅಲ್ಲದೇ, ಸ್ವಲ್ಪ ಸ್ಟೆಪ್ ಹಾಕಿದರು. ಆದರೂ ಕೂಡ ವಧು ಶಾರುಖ್ ನೃತ್ಯವನ್ನು ನಿರ್ಲಕ್ಷಿಸಿದ್ದಾರೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ಬೇಸರ ವ್ಯಕ್ತಪಡಿಸಿರುವ ಶಾರುಖ್ ಅಭಿಮಾನಿಗಳು, ಮನಸ್ಸಿಲ್ಲದಿದ್ದರೆ ಇವರನ್ನು ಏಕೆ ಕರೆಸಿದ್ದೀರಿ..? ನಾಲ್ಕು ಸ್ಟೆಪ್ ಹಾಕಲು ಆಕೆಗೆ ಏನು ಪ್ರಾಬ್ಲಮ್..? ಶಾರುಖ್ ಜತೆ ಸ್ಟೆಪ್ ಹಾಕೋದು ಎಷ್ಟು ಹುಡುಗಿಯರ ಕನಸು, ನಿನಗೆ ಅಂಥ ಅವಕಾಶ ಸಿಕ್ಕರೂ ಉಪಯೋಗವಿಲ್ಲ ಅಂತಾ ಹಲವರು ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss