Thursday, November 13, 2025

Latest Posts

ಹೃದಯಾಘಾತ ತಪ್ಪಿಸಲು ಚುರುಕಾದ ನಡಿಗೆ ಅಗತ್ಯ !

- Advertisement -

ಚುರುಕಾದ ನಡಿಗೆ, ಏರೋಬಿಕ್ಸ್, ಈಜು,(Swimming) ಸೈಕ್ಲಿಂಗ್, ಓಟ — ಇವೆಲ್ಲವೂ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವ್ಯಾಯಾಮಗಳು. ಆದರೆ ಎಲ್ಲರಿಗೂ ಈ ಎಲ್ಲ ಚಟುವಟಿಕೆಗಳು ಸಾಧ್ಯವಿಲ್ಲದಿರಬಹುದು. ಆದ್ದರಿಂದ ಪ್ರತಿದಿನ ವಾಕಿಂಗ್ ಮಾಡುವ ಅಭ್ಯಾಸವು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ನಡೆಯುವುದರಿಂದ ಹೃದಯಾಘಾತದ(Heart Attack) ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಈ ಒಂದು ಅಭ್ಯಾಸ ನಿಮ್ಮ ದೇಹ ಮತ್ತು ಮನಸ್ಸಿನ ತಾಜಾತನವನ್ನು ಉಳಿಸಿ, ದಿನದ ಉತ್ಸಾಹವನ್ನು ಹೆಚ್ಚಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಅನೇಕರು ಜೀವನಶೈಲಿಯ(life style) ಬದಲಾವಣೆ, ಒತ್ತಡ ಮತ್ತು ಅಸಮತೋಲನ ಆಹಾರದ ಪರಿಣಾಮವಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಚಳಿಗಾಲದಲ್ಲಿ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರತಿದಿನ ವೇಗವಾಗಿ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಅತ್ಯಂತ ಉಪಯುಕ್ತ. ವಾಕಿಂಗ್ ದೇಹದ ರಕ್ತ ಸಂಚಾರವನ್ನು ಸುಧಾರಿಸುತ್ತದೆ, ಹೃದಯದ ಶಕ್ತಿ ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನೂ ಶಾಂತಗೊಳಿಸುತ್ತದೆ.

ಆರೋಗ್ಯ ತಜ್ಞರ ಸಲಹೆಯಂತೆ, ವಾರಕ್ಕೆ ಸರಾಸರಿ 200 ನಿಮಿಷಗಳಷ್ಟು ವೇಗದಲ್ಲಿ ನಡೆಯುವುದು ಸೂಕ್ತ. ಅಂದರೆ ಪ್ರತಿದಿನ ಸುಮಾರು 40 ನಿಮಿಷಗಳ ಕಾಲ ಚುರುಕಾಗಿ ನಡೆಯುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ವೇಗವಾಗಿ ನಡೆಯುವುದರಿಂದ ದೇಹದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಹೃದಯಾಘಾತದ ಅಪಾಯ ತಗ್ಗುತ್ತದೆ. ಹೀಗಾಗಿ ನಿಧಾನ ನಡಿಗೆಯ ಬದಲು ಚುರುಕಾದ ನಡಿಗೆಯನ್ನು ಆಯ್ಕೆ ಮಾಡುವುದು ಉತ್ತಮ. ಆದರೆ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ನಿಯಮಿತ ವಾಕಿಂಗ್‌ನೊಂದಿಗೆ ಹೃದಯ ಮಾತ್ರವಲ್ಲ, ಯಕೃತ್ತು, ಮೆದುಳು,(Brain) ಮತ್ತು ದೇಹದ ಸಂಪೂರ್ಣ ಚಟುವಟಿಕೆಗಳು ಸುಧಾರಿಸುತ್ತವೆ. ಚುರುಕಾದ ನಡಿಗೆ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮಧುಮೇಹ, ರಕ್ತದೊತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ದಿನದ ಪ್ರಾರಂಭವನ್ನು ವಾಕಿಂಗ್‌ನಿಂದ ಆರಂಭಿಸುವುದು ಅಥವಾ ಸಂಜೆ ವೇಳೆಯಲ್ಲಿ ಹಸನಾದ ಗಾಳಿಯಲ್ಲಿ ನಡೆಯುವುದು ನಿಮ್ಮ ದೇಹಕ್ಕೆ ಹೊಸ ಜೀವ ತುಂಬುತ್ತದೆ. ಹೀಗಾಗಿ, ಇಂದಿನಿಂದಲೇ ವಾಕಿಂಗ್ ಅನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿ, ನಿಮ್ಮ ಹೃದಯದ ಆರೈಕೆ ನಿಮ್ಮ ಕೈಯ್ಯಲ್ಲಿ…..

ಗಾಯತ್ರಿ ಗುಬ್ಬಿ

- Advertisement -

Latest Posts

Don't Miss