1978ರಲ್ಲಿ ತಮಿಳುನಾಡಿನ ನಾಗಪಟ್ಟಣಂ ದೇವಾಲಯದಿಂದ ಕಳವು ಮಾಡಲಾಗಿದ್ದ ರಾಮ, ಸೀತೆ ಹಾಗೂ ಲಕ್ಷ್ಮಣರ ಪುರಾತನ ಕಂಚಿನ ವಿಗ್ರಹಗಳನ್ನ ಹಿಂದುರಿಗಿಸಲು ಯುಕೆ ಸರ್ಕಾರ ಒಪ್ಪಿಗೆ ನೀಡಿದೆ.

2019ರ ಆಗಸ್ಟ್ನಲ್ಲಿ ಈ ಸಂಬಂಧ ಅಧ್ಯಯನ ನಡೆಸಿದ್ದ ಲಂಡನ್ನ ಇಂಡಿಯನ್ ಹೈ ಕಮಿಷನ್ ಭಾರತಕ್ಕೆ ಸೇರಿರುವ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ಕಂಚಿನ ವಿಗ್ರಹಗಳು ಬ್ರಿಟನ್ನಲ್ಲಿವೆ ಅಂತಾ ಭಾರತಕ್ಕೆ ಮಾಹಿತಿ ನೀಡಿತ್ತು.
ಇದಾದ ಬಳಿಕ ಲಂಡನ್ನ ಮೆಟ್ರೋಪಾಲಿಟನ್ ಪೊಲೀಸರ ಆರ್ಟ್ & ಆಂಟಿಕ್ ಯುನಿಟ್ ಹಾಗೂ ತಮಿಳುನಾಡು ಪೊಲೀಸರ ಐಡಿಯಲ್ ವಿಂಗ್ ಕಾರ್ಯಾಚರಣೆ ನಡೆಸಿತು. ಈ ವೇಳೆ ತಮಿಳುನಾಡು ಪೊಲೀಸರು ಇದು ವಿಜಯನಗರ ಸಾಮ್ರಾಜ್ಯ ಕಾಲದ ವಿಗ್ರಹವೆಂದೂ ಹಾಗೂ 1978ರಲ್ಲಿ ಇದನ್ನ ಕಳವು ಮಾಡಲಾಯ್ತೆಂದು ವರದಿ ನೀಡಿತು.ಇದಾದ ಬಳಿಕ ಈ ವಿಗ್ರಹಗಳನ್ನ ಲಂಡನ್ ಹೈಕಮಿಷನ್ಗೆ ವರ್ಗಾಯಿಸಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡು ಸರ್ಕಾರದ ಕೈ ಸೇರಲಿದೆ.

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.




