Tuesday, October 15, 2024

Latest Posts

ಬೀದಿ ಬದಿಯ ಭಾಂಗ್‌ ಲಸ್ಸಿ ಕುಡಿದು ಅಸ್ವಸ್ಥನಾದ ಬ್ರಿಟೀಷ್ ಯೂಟ್ಯೂಬರ್ ಸ್ಯಾಮ್ ಪೆಪ್ಪರ್

- Advertisement -

Ujjain News: ಭಾರತ ರುಚಿ ರುಚಿಯಾದ ತಿಂಡಿಗಳಿಂದಾನೇ ಫೇಮಸ್ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ತಿಂಡಿಗಳು ಸಖತ್ ಫೇಮಸ್ ಇದ್ದು, ಎಲ್ಲ ತಿಂಡಿಗಳ ರುಚಿ ಸವಿಯಲು ಒಂದು ಜನ್ಮವೇ ಬೇಕಾಗಬಹುದು. ಆದರೆ ಕೆಲವರು ಆರೋಗ್ಯಕರ ಪದಾರ್ಥಗಳನ್ನು ಹಾಕಿ ಅಡುಗೆ ಮಾಡುವುದಿಲ್ಲ. ಸ್ವಚ್ಛತೆ ಕಾಪಾಡಿಕೊಂಡಿರುವುದಿಲ್ಲ. ಹಾಗಾಗಿ ಅಂಥ ಸ್ಥಳದಲ್ಲಿ ಆಹಾರ ಸೇವಿಸಿದರೆ, ಆರೋಗ್ಯ ಕೆಡೆಸಿಕೊಂಡು ಆಸ್ಪತ್ರೆ ಸೇರೋದು ಗ್ಯಾರಂಟಿ.

ಅದೇ ರೀತಿ ವಿದೇಶಿ ಕಂಟೆಂಟ್ ಕ್ರಿಯೆಟರ್ ಓರ್ವ, ಭಾಂಗ್ ಲಸ್ಸಿ ಸೇವಿಸಿ, ಆಸ್ಪತ್ರೆ ಪಾಲಾಗಿದ್ದು, ಇನ್ನು ಜನ್ಮದಲ್ಲಿ ಬೀದಿ ಬದಿ ತಿಂಡಿ ಟೇಸ್ಟ್ ಮಾಡುವುದಿಲ್ಲ ಎಂದಿದ್ದಾನೆ. ಬ್ರಿಟೀಶ್ ಯೂಟ್ಯೂಬರ್ ಸ್ಯಾಮ್ಯೂವಲ್ ನಿಕೋಲಸ್ ಪೆಪ್ಪರ್ ಬೀದಿ ಬದಿಯ ಬಾಂಗ್ ಲಸ್ಸಿ ಕುಡಿದಿದ್ದಾರೆ. ಬಳಿಕ ಸ್ಯಾಮ್ ಪೆಪ್ಪರ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ರೇಂಜಿಗೆ ಆರೋಗ್ಯ ಕೆಡಿಸಿಕೊಂಡಿದ್ದಾರೆ.

ಉಜ್ಜಯಿನಿಗೆ ಭೇಟಿ ನೀಡಿದ ವೇಳೆ ಬೀದಿ ಬದಿ ಮಾರುತ್ತಿದ್ದ ಲಸ್ಸಿಯನ್ನು ನೋಡಿ, ಅದನ್ನು ಕುಡಿಯಬೇಕು ಎಂದು ಸ್ಯಾಮ್ ಅಂದುಕೊಂಡಿದ್ದಾರೆ. ಆ ಲಸ್ಸಿಯಲ್ಲಿ ಬಾಂಗ್‌ನಂಥ ಮಾದಕ ವಸ್ತುವನ್ನು ಬೆರೆಸಿ, ಬಾಂಗ್ ತಯಾರಿಸಿ, ಕುಡಿಯಲು ಕೊಡಲಾಗಿದೆ. ಕುಡಿಯುವಾಗ, ಟೇಸ್ಟಿಯಾಗೇ ಇದ್ದ ಬಾಂಗ್ ಲಸ್ಸಿ, ಕುಡಿದು ಕೆಲ ದಿನಗಳ ಬಳಿಕ, ದೇಹದಲ್ಲಿ ತಳಮಳ ಶುರು ಮಾಡಿದೆ.

ಈ ಬಗ್ಗೆ ಆತನೇ ಮಾತನಾಡಿದ್ದು, ಬಾಂಗ್ ಲಸ್ಸಿ ಕುಡಿದು ನಾನು ಅಸ್ವಸ್ಥನಾಗಿಲ್ಲ. ಬದಲಾಗಿ ಅಲ್ಲಿ ಒಂಚೂರು ಸ್ವಚ್ಛತೆ ಇರಲಿಲ್ಲ. ಆ ಕಾರಣಕ್ಕಾಗಿ ನನ್ನ ಆರೋಗ್ಯ ಹಾಳಾಗಿದೆ. ಅದನ್ನು ತಯಾರಿಸುವವರ ಕೈ ಬೆರಳು, ಉಗುರು ಕಪ್ಪು ಕಪ್ಪಾಗಿತ್ತು. ಅದೇ ಕೈಗಳನ್ನು ಗ್ಲಾಸಿನಲ್ಲಿ ಅದ್ದಿ ಮೊಸರು ಕಡಿಯುತ್ತಾರೆ. ಬಳಿಕ ಬಟ್ಟೆಯಲ್ಲಿ ಗಾಳಿಸಿ, ಬಾಂಗ್ ಬೆರೆಸಿ ಕೊಡುತ್ತಾರೆ. ಬಟ್ಟೆ ಮತ್ತು ಕೈಯಲ್ಲಿ ಸ್ವಚ್ಛತೆ ಇಲ್ಲದ ಕಾರಣ, ನನ್ನ ಆರೋಗ್ಯ ಹಾಳಾಗಿದೆ ಎಂದು ನಿಕೋಲಸ್ ಹೇಳಿದ್ದಾರೆ.

- Advertisement -

Latest Posts

Don't Miss