ಅಣ್ಣನಿಗೆ ಚಿನ್ನದ ಮಳೆ ಸುರಿಸಿದ ತಲೈವಾ

ಅಣ್ಣನ ಬರ್ತಡೇ ಚಿನ್ನದ ಸುರಿಮಳೆ ಸುರಿಸಿದ ಧನುಷ್

ಸೂಪರ್ ಸ್ಟಾರ್ ಮಹಾ ಶಿವರಾತ್ರಿಯನ್ನು ಬೆಂಗಳೂರಿನಲ್ಲಿ ಆಚರಿಸಿದ್ದಾರೆ. ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಈ ವಿಶೇಷ ದಿನದಂದು ರಜನಿಕಾಂತ್ ಮತ್ತು ಅವರ ಪತ್ನಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮಹಾ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಿದ್ದರು. ಶಿವರಾತ್ರಿ ಆಚರಿಸಿದ ಮಾರನೆ ದಿನವೇ ರಜನಿಕಾಂತ್ ಅಣ್ಣನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಅಣ್ಣನ ಹುಟ್ಟುಹಬ್ಬ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಭಾಗಿಯಾಗಿದ್ದರು. ವಿಶೇಷ ಎಂದರೆ ಅಣ್ಣನ ಹುಟ್ಟುಹಬ್ಬದ ದಿನವೇ ಅವರ ಮಗ ರಾಮಕೃಷ್ಣ ಅವರ ಜನ್ಮದಿನವೂ ಆಗಿತ್ತು.

ನನ್ನ ಸಹೋದರ ಸತ್ಯನಾರಾಯಣ ರಾವ್ ಗಾಯಕವಾಡ ಅವರ 80 ನೇ ಹುಟ್ಟುಹಬ್ಬ ಮತ್ತು ಅವರ ಮಗ ರಾಮಕೃಷ್ಣ ಅವರ 60 ನೇ ಹುಟ್ಟುಹಬ್ಬವನ್ನು ನನ್ನ ಕುಟುಂಬದೊಂದಿಗೆ ಒಂದೇ ದಿನ ಆಚರಿದ್ದು ಸಂತೋಷವಾಗಿದೆ. ನಾನು ಇವತ್ತು ಏನಾಗಿದ್ದೇನೋ ಅದಕ್ಕೆ ಅಣ್ಣನೆ ಕಾರಣ. ಈ ಚಿನ್ನದ ಹೃದಯಕ್ಕೆ ಚಿನ್ನದ ಮಳೆಯ ಸುರಿಮಳೆ’ ಎಂದು ಹೇಳಿದ್ದಾರೆ

About The Author