Wednesday, January 22, 2025

Latest Posts

150 ಕೋಟಿ ವೆಚ್ಚದಲ್ಲಿ ಧನುಷ್ ಮನೆ

- Advertisement -

ಧನುಷ್ ಮತ್ತು ಐಶ್ವರ್ಯಾ ದಂಪತಿ ವಿಚ್ಛೇದನ ಪಡೆಯುತ್ತಿರುವುದಾಗಿ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. 2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ದಾಂಪತ್ಯಕ್ಕೆ ಕಾಲಿಟ್ಟರು. ಈ ದಾಂಪತ್ಯಕ್ಕೆ ಯಾತ್ರಾ ಮತ್ತು ಲಿಂಗ್ ಎಂಬ ಇಬ್ಬರೂ ಗಂಡು ಮಕ್ಕಳಿದ್ದಾರೆ
ಚೆನ್ನೈನ ಪೋಯಿಸ್ ಗಾರ್ಡನ್​ನಲ್ಲಿ ಕಾಲಿವುಡ್‌ನ ಅನೇಕ ಸಿನಿಮಾ ಗಣ್ಯರ ಮನೆಗಳಿವೆ. ವಿಶೇಷ ಎಂದರೆ ಸೂಪರ ಸ್ಟಾರ್ ರಜನಿಕಾಂತ್ ಮನೆ ಇರುವುದು ಸಹ ಅಲ್ಲೆ.

ಇನ್ನೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಾಸಿಸಿದ್ದ ಬಹುಕೋಟಿ ಬಂಗಲೆ ಇರುವುದು ಕೂಡ ಪೋಯಿಸ್​​ ಗಾರ್ಡನ್​ನಲ್ಲಿ. ಕಳೆದ ಎರಡು ವರ್ಷಗಳ ಹಿಂದೆ ಧನುಷ್ ಹೊಸ ಮನೆಗೆ ಭೂಮಿ ಪೂಜೆ ಮಾಡಲಾಗಿತ್ತು. ಭೂಮಿ ಪೂಜೆಯಲ್ಲಿ ರಜನಿಕಾಂತ್ ದಂಪತಿ ಮತ್ತು ಮಾಜಿ ಪತ್ನಿ ಐಶ್ವರ್ಯಾ ಸಮ್ಮುಖದಲ್ಲಿ ನೆರವೇರಿತ್ತು. ಆದರೆ ಗೃಹ ಪ್ರವೇಶದ ವೇಳೆಗೆ ಧನುಷ್ ಮತ್ತು ಐಶ್ವರ್ಯಾ ದಂಪತಿ ದೂರ ದೂರ ಆಗಿದ್ದಾರೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ.

- Advertisement -

Latest Posts

Don't Miss