www.karnatakatv.net : ಬೆಳಗಾವಿ: ಸಿಎಂ ರಾಜೀನಾಮೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಿಎಂ. ಯಡಿಯೂರಪ್ಪ ಅವರದು 50 ವರ್ಷ ರಾಜಕೀಯದಲ್ಲಿ ಅನುಭವ ಇದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .
ಬಹಳಷ್ಟು ದುಖಃದಿಂದ ಯಡಿಯೂರಪ್ಪ ಭಾಷಣ ಮಾಡಿದರು ಇವತ್ತು ಯುಗಾಂತ್ಯ ಆಯಿತು ಎಂದು ಆ ಕ್ಷಣದಲ್ಲಿ ಅನಿಸಿತು ಹಾಗೇಯೆ 2023ರ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಬಿಜೆಪಿಯ ಬೆಳವಣಿಗೆ ಕಾತುರದಿಂದ ನೋಡುತ್ತಿದೆ ಒಳ್ಳೆಯ ಆಡಳಿತ ನಡೆಸಿದ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೆವೆ ಎಂದರು.

ಹೋರಾಟ, ಧೈರ್ಯದ ಬಗ್ಗೆ ಅಭಿಮಾನ ಇದೆ ಆದರೆ ಯಡಿಯೂರಪ್ಪ ಅವರಿಗೆ ಅವಧಿ ಪೂರ್ಣ ಮಾಡಲು ಅವಕಾಶದ ಕುರಿತು ಬಿಜೆಪಿ ಪಕ್ಷದ ಆಂತರಿಕ ವಿಚಾರ ಎಂದರು ಹಾಗೇಯೆ ಪಕ್ಷಾತೀತವಾಗಿ ಲೆಜೆಂಡ್ ನಾಯಕರಾಗಿ ಕೆಲಸ ಮಾಡಿದವರು.ಇದರಿಂದ ಯಡಿಯೂರಪ್ಪ ರಾಜೀನಾಮೆ ನೀಡುವಾಗ ದುಃಖದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯವಾಗಿತ್ತು ಎಂದರು.

ರಾಜ್ಯದಲ್ಲಿ ಕೋವಿಡ್, ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ ಜನರ ಕಾಳಜಿಗಿಂತ ರಾಜಕೀಯ ಮುಖ್ಯವಾಗಿದ್ದು ಸರಿಯಲ್ಲ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು.ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿಗರಿಗೆ ಆಡಳಿತಕ್ಕಿಂತ ರಾಜಕೀಯ ಮುಖ್ಯ ಅನಿಸುತ್ತದೆ ಎಂದು ನಗರದಲ್ಲಿ ಮಾಧ್ಯಮದವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು.

