ಬೆಂಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾಗಿರೋ ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವೆ ಸ್ಥಾನ ನೀಡುವ ಬಗ್ಗೆ ವರಷ್ಠರಿಗೆ ಮನವರಿಕೆ ಮಾಡಿಕೊಳ್ಳುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ವೈ, ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರಿಗೆ ಮನವರಿಕೆ ಮಾಡುತ್ತೇನೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳೋದು ಅವರಿಗೆ ಬಿಟ್ಟದ್ದು ಎಂದರು.
ಇನ್ನು ಲೋಕಸಭಾ ಚುನವಾಣೆ ಬಗ್ಗೆ ನಾನು ಹೇಳಿದ ಭವಿಷ್ಯವೆಲ್ಲಾ ನಿಜವಾಗಿದೆ ಅಂತ ಹೇಳಿದ ಯಡಿಯೂರಪ್ಪ, ಜೂನ್ 25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಎಲ್ಲಾ 25 ಸಂಸದರನ್ನು ಸನ್ಮಾನಿಸಲು ನಿರ್ಧರಿಸಿದ್ದೇವೆ ಅಂತ ಮಾಹಿತಿ ನೀಡಿದ್ರು.
ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ ಗೆಲುವು ಸಾಧಿಸಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಲ್ಲಿ ನಾನು ಸೂಚಿಸಿದ ಅಭ್ಯರ್ಥಿ ಕಣಕ್ಕಿಳಿದಿದ್ದರೆ ಆ ಕ್ಷೇತ್ರವೂ ನಮ್ಮ ಪಾಲಾಗುತ್ತಿತ್ತು ಅಂತ ಹೇಳಿದರು.
ರಾಜ್ಯದ ಸಿಂಗಂ ರಾಜೀನಾಮೆ ಕೊಡಲು ಏನು ಕಾರಣ? ಈ ವಿಡಿಯೋ ತಪ್ಪದೇ ನೋಡಿ