Saturday, July 20, 2024

Latest Posts

BSY HDK ಸೀಕ್ರೆಟ್ ಡೀಲ್, ಮೋದಿ, ಅಮಿತ್ ಶಾ ಕಂಗಾಲ್..!

- Advertisement -

ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲದೇ ಹೋದರೆ ಶಕ್ತಿ ಹೀನಾ.. ಈ ವಿಷಯ ಬರೀ ಯಡಿಯೂರಪ್ಪ ಬೆಂಬಲಿಗರಷ್ಟೇ ಅಲ್ಲ ಸ್ವತಃ ಮೋದಿ, ಅಮಿತ್ ಶಾ ಗೂ ಗೊತ್ತಿರುವ ವಿಷಯವೇ..

ಆದರೂ ಕಳೆದ 5 ವರ್ಷಗಳಿಂದ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ಅವಮಾನಗಳು ಒಂದಾ-ಎರಡಾ..? 5 ವರ್ಷಗಳಲ್ಲಿ 5 ಬಾರಿ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ನಿರಾಸೆಗೊಳಿಸಿದ್ರು. ಇದೀಗ 6 ನೇ ಬಾರಿ ದೊಡ್ಡ ಶಾಕ್ ಕೊಡಲು ಮುಂದಾಗಿದ್ದ ಮೋದಿ-ಅಮಿತ್ ಶಾಗೆ ಯಡಿಯೂರಪ್ಪ ಕೊಟ್ಟ ಶಾಕ್ ಪತರುಗುಟ್ಟುವಂತೆ ಮಾಡಿದೆ. ಅಷ್ಟಕ್ಕೂ 5 ವರ್ಷಗಳಲ್ಲಿ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ನಿರಾಸೆಗಳೇನು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

2013ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದ ವಿಷಯ ದೇಶದ ಜನಕ್ಕೆ ಗೊತ್ತಿರುವ ವಿಷಯವೇ. ನಂತರ 2014ರ ಲೋಕಸಭಾ ಚುನಾವಣಾ ವೇಳೆಗೆ ಮೋದಿ ಮತ್ತೆ ಯಡಿಯೂರಪ್ಪರನ್ನ ಬಿಜೆಪಿ ಕರೆತಂದ್ರು.. ಆದ್ರೆ ಆ ವೇಳೆ ಸ್ವತಂತ್ರವಾಗಿ ಚುನಾವಣೆ ಗೆಲ್ಲಲಾಗದ ಈಶ್ವರಪ್ಪ ಬಣ ಯಡಿಯೂರಪ್ಪ ಸೇರ್ಪಡೆಗೆ ವಿರೋಧ ಮಾಡಿ ತಣ್ಣಗಾಯ್ತು..

2014ರಲ್ಲಿ ಬಿಎಸ್ ವೈಗೆ ಮಿಸ್ ಆಗಿತ್ತು ಕೇಂದ್ರ ಕೃಷಿ ಸಚಿವ ಪಟ್ಟ..!

ಯಡಿಯೂರಪ್ಪ ಕೆಜೆಪಿಯನ್ನ ಬಿಜೆಪಿಯಲ್ಲಿ ವಿಲೀನ ಮಾಡಿದ್ದರ ಜೊತೆ ಬಿಎಸ್ ಆರ್ ಕಾಂಗ್ರೆಸ್ ನ ರಾಮುಲು ಬಿಜೆಪಿ ಸೇರಿ ಇಬ್ಬರು ಸಂಸದರಾದ್ರು.. ಯಡಿಯೂರಪ್ಪ ಮೋದಿ ಸಂಪುಟದಲ್ಲಿ ಕೃಷಿ ಸಚಿವರಾಗ್ತಾರೆ, ರಾಮುಲು ಕೂಡ ಕ್ಯಾಬಿನೆಟ್ ಸೇರ್ತಾರೆ  ಅಂತ ಮಾತನಾಡ್ತಿರುವ ಸಂದರ್ಭದಲ್ಲಿ ಮೋದಿ, ಅಮಿತ್ ಶಾ ಇಬ್ಬರು ಸೇರಿ ರಾಮುಲು, ಯಡಿಯೂರಪ್ಪಗೆ ಕೈ ಕೊಟ್ರು.. ಈ ವೇಳೆ ಯಡಿಯೂರಪ್ಪಗೆ ಮೊದಲ ಹಿನ್ನಡೆ ಆಯ್ತು.. ಸಂಪುಟದಲ್ಲಿ ಕ್ಲೀನಾಗಿರುವವರು ಇರಬೇಕು ಹಾಗಾಗಿ ಯಡಿಯೂರಪ್ಪಗೆ ಅವಕಾಶ ಸಿಕ್ಕಿಲ್ಲ ಅಂತ ಬಿಎಸ್ ವೈ ವಿರೋಧಿಗಳು ಕ್ಲೀನ್ ಇಮೇಜ್ ಪಾಠ ಮಾಡ್ತಿದ್ರು.. ಸಂಸದರಾಗಲು ಬೇಕಿರದ ಕ್ಲೀನ್ ಇಮೇಜ್ ಸಂಪುಟ ಸೇರುವಾಗ ಬೇಕಾ ಅಂತ ಯಡಿಯೂರಪ್ಪ, ರಾಮುಲು ಹೌಹಾರಿದ್ರು. ನಂತರ ಮೋದಿ ಯಾವುದೇ ಕಾರಣಕ್ಕೂ ತನಗೆ ಅವಕಾಶ ಕೊಡಲ್ಲಅಂತ ಗೊತ್ತಾಗಿದ್ದೆ ತಡ ರಾಜ್ಯ ರಾಜಕಾರಣಕ್ಕೆ ಯಡಿಯೂರಪ್ಪ ವಾಪಸ್ ಆದ್ರು..

ಯಡಿಯೂರಪ್ಪ ರಾಜ್ಯಾಧ್ಯಕ್ಷ ಮಾಡಲು ಸತಾಯಿಸಿತ್ತು ಹೈಕಮಾಂಡ್

ಆದ್ರೆ ಯಡಿಯೂರಪ್ಪರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಮೋದಿ, ಅಮಿತ್ ಶಾ ಸತಾಯಿಸಿದ್ರು..  ನಂತರ 2018 ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ವರುಣಾದಲ್ಲಿ ಟಿಕೆಟ್ ನೀಡಿದ್ರೆ ಗೆಲುವು ಸಾಧಿಸ್ತಿದ್ರು. ಆದ್ರೆ ವಿಜಯೇಂದ್ರಗೆ ಕಡೇ ಗಳಿಗೆಯಲ್ಲಿ ಟಿಕೆಟ್ ತಪ್ಪಿಸಿದ್ರು.. ಇದಲ್ಲದೇ ಯಡಿಯೂರಪ್ಪ ಹೇಳಿದವರಿಗೆ ಟಿಕೆಟ್ ಕೊಟ್ಟಿದ್ರೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರೋದು. ಆದ್ರೆ, ಜೆಡಿಎಸ್ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಅಲ್ಲೂ ಕಡ್ಡಿ ಅಲ್ಲಾಡಿಸಿದ ಕಮಲ ನಾಯಕರು ಯಡಿಯೂರಪ್ಪ ಬಹುಮತದ ಹೊಸ್ತಿಲಲ್ಲಿ ಮುಗ್ಗರಿಸುವಂತೆ ಮಾಡಿ ದ್ರು.

ಲೋಕಸಭಾ ಚುನಾವಣೆ ಹೆಸರೇಳಿ ಮೊದಲ ಆಪರೇಷನ್ ಗೆ ಅಡ್ಡಿ

ಮೋದಿ ಮತ್ತೆ ಪ್ರಧಾನಿಯಾದ್ರೂ ಬಿಎಸ್ ವೈಗೆ ಕಿರುಕುಳ ಕಂಟಿನ್ಯೂ

ನಂತರ ಕುಮಾರಸ್ವಾಮಿ ಸರ್ಕಾರದಿಂದ ದಷ್ಟು ಜನ ಕಾಂಗ್ರೆಸ್ ಶಾಸಕರು ದಂಡಿಯಾಗಿ ಹೊರ ಬರ್ತೀವಿ ಅಂದ್ರು ಲೋಕಸಭಾ ಚುನಾವಣೆ ವರೆಗೂ ಸುಮ್ಮನಿರಿ ಅಂತ ಯಡಿಯೂರಪ್ಪ ಕೈ ಕಟ್ಟಿ ಹಾಕಿದ್ರು ಈ ಅಮಿತ್ ಶಾ ಟೀಂ.. ಬಿಜೆಪಿ ಹೈಕಮಾಂಡ್ ನ  ದುರಹಂಕಾರಿ ಧೋರಣೆ ವಿರುದ್ಧ ಕೋಪಗೊಂಡಿದ್ದ ಯಡಿಯೂರಪ್ಪ ಹಲ್ಲು ಕಚ್ಚಿ ಸುಮ್ಮನಾಗಿದ್ರು. ಲೋಕಸಭಾ ಫಲಿತಾಂಶ ಬಂದ ಮೇಲೂ ಸಂತೋಷ್ ಜೀ ಪಟಲಾಂ ಮಾತು ಕೇಳಿ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕ್ತಿದ್ದ ಅಮಿತ್ ಶಾ ಆಟಕ್ಕೆ ಯಡಿಯೂರಪ್ಪ ಸಿಡಿದೇಳುವಂತೆ ಮಾಡ್ತು..

ಮೋದಿ ಬೇಡವೆಂದ್ರು ಆಪರೇಷನ್ ಮಾಡಿದ ಯಡಿಯೂರಪ್ಪ

ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರಿಗೆ ತಡೆ ಹಾಕಿದ್ರಂತೆ ಶಾ..!

ಸವದಿಯನ್ನ ಸವತಿಯಂತೆ ತಗ್ಲಾಕಿದ್ರಂತೆ ಸಂತೋಷ್ ಜೀ..!

 ಮೋದಿ, ಶಾ ನಿಧಾನ ಗತಿಗೆ ಬೇಸತ್ತ ಯಡಿಯೂರಪ್ಪ ನೀವೇನು ಮಾಡಬೇಡಿ ನಾನೆ ಎಲ್ಲಾ  ಮಾಡ್ತೀನಿ ಅಂತ  ಜೆಡಿಎಸ್-ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿ ಕುಮಾರಸ್ವಾಮಿ ಸರ್ಕಾರ ಬೀಳಿಸಿದ್ರು.. ಆದ್ರೆ ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್ ಕೊಡದೆ ಅಮಿತ್ ಶಾ, ಮೋದಿ ಭಾರೀ ಸತಾಯಿಸಿದ್ರು. ನಂತರ ಪ್ರಮಾಣ ವಚನಕ್ಕೆ ಅವಕಾಶ ಕೊಟ್ರು. ಆದ್ರೆ ಕ್ಯಾಬಿನೆಟ್ ರಚನೆ ಮಾಡಿಕೊಳ್ಳಲು ಅಮಿತ್ ಶಾ ಬಿಡಲೇ ಇಲ್ಲ.. ಸೋತು ಸುಣ್ಣವಾಗಿದ್ದ ಸವದಿಗೆ ಡಿಸಿಎಂ ಪಟ್ಟ ಕಟ್ಟಿ ಯಡಿಯೂರಪ್ಪ ರಾಜಕೀಯದಲ್ಲಿ ಸವತಿಯನ್ನ ಹುಟ್ಟು ಹಾಕಿದ್ರು. ಆಪರೇಷನ್ ಕಮಲಕ್ಕಾಗಿ ಓಡಾಡಿದವರನ್ನ ಮೂಲೆಗೆ ಸೇರಿಸಿ. ಬೇಕಾಬಿಟ್ಟಿಯಾಗಿ ಸಂಪುಟ ಪಟ್ಟಿಯನ್ನ ಹೈಕಮಾಂಡ್ ಬಿಡುಗಡೆ ಮಾಡ್ತು.. ಈ ನಡುವೆ ರಾಜೀನಾಮೆ ಕೊಟ್ಟ ಶಾಸಕರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರದಂತೆ ತಿಂಗಳುಗಟ್ಟಲೇ ತಡ ಮಾಡಿಸಿದ್ದು ಅಮಿತ್ ಶಾ ಅನ್ನುವ ಆರೋಪ ಇದೆ. ಅಲ್ಲದೇ ಮಹಾರಾಷ್ಟ್ರ, ಹರಿಯಾಣ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಮಾಡುವ ಉತ್ಸಾಹದಲ್ಲಿ ಮೋದಿ, ಅಮಿತ್ ಶಾ ಇದ್ರು. ಆದ್ರೆ ಯಾವಾಗ ಮಹಾರಾಷ್ಟ್ರ, ಹರಿಯಾಣದಲ್ಲಿ ಮುಗ್ಗರಿಸಿದ್ರೋ ಆ ವೇಳೆ ಕರ್ನಾಟಕದಲ್ಲಿ ಕೇಸರಿ ಹೈಕಮಾಂಡ್ ಕಿರಿಕ್ ಮಾಡೋದನ್ನ ನಿಲ್ಲಿಸಿತು.. ಆದ್ರೆ ರಾಜ್ಯದಲ್ಲಿ ಯಡಿಯೂರಪ್ಪ ವಿರುದ್ಧ ಮೋದಿ, ಶಾ ಬೆಳೆಸಿದ್ದ ಪುಡಾರಿಗಳ ಪಡೆ ಭಾರೀ ಹಿಂಸೆ ಕೊಡಲು ಶುರು ಮಾಡಿತ್ತು. ಅನರ್ಹ ಶಾಸಕರಿಗೆ ಟಿಕೆಟ್ ಕೊಡಲ್ಲಅಂತ ಬಹಿರಂಗವಾಗಿ ಹೇಳುತ್ತಾ ಯಡಿಯೂರಪ್ಪರನ್ನ ಪ್ರಚೋದಿಸಲು ಶುರು ಮಾಡಿತ್ತು. ಹೀಗಾಗಿ ಯಡಿಯೂರಪ್ಪ  ಈ ವೇಳೆ ಮೋದಿ, ಶಾ ಬಗ್ಗೆ ಸಂಪೂರ್ಣವಾಗಿ ಬೇಸತ್ತು ಹೋಗಿದ್ರು. ಧಾರವಾಡದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸೀದಾ ಸಾದ ಎಲ್ಲಾ ವಿಚಾರವನ್ನ ಬಿಜೆಪಿಯಲ್ಲಿರುವ ಮೀರ್ ಸಾಧಿಕ್ ಗಳ ಮುಖಕ್ಕೆ ಹೊಡೆದಂತೆ ಹೇಳಿರೋದು ಇಡೀ ರಾಜ್ಯಕ್ಕೆ ಗೊತ್ತು..

ಯಡಿಯೂರಪ್ಪಗೆ ನೆಮ್ಮದಿ ಕೊಡದ ಅಮಿತ್ ಶಾ

ಜೆಡಿಎಸ್ ಜೊತೆ ಮೈತ್ರಿಗೆ ಮೋದಿ ಸದ್ದಿಲ್ಲದೇ

ಕರ್ನಾಟಕದಲ್ಲಿ ಯಡಿಯೂರಪ್ಪ ಪವರ್ ಫುಲ್ ಅಂತ ಗೊತ್ತಿದ್ರು ಸೈಲೆಂಟಾಗಿ ಮೋದಿ ಜೆಡಿಎಸ್ ಜೊತೆ ಫ್ರೆಂಡ್ ಶಿಪ್ ಶುರು ಮಾಡಿದ್ರು.. ಯಡಿಯೂರಪ್ಪ ಬದಲು ಬೇರೆಯವರನ್ನ ಸಿಎಂ ಮಾಡಿ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡೋಣ ಅಂತ ತೀರ್ಮಾನ ಕೂಡ ಮಾಡಿಕೊಂಡಿದ್ರು.. ಮೋದಿ, ಅಮಿತ್ ಶಾ ಬ್ಯಾಕ್ ಡೋರ್ ಆಟ ಗೊತ್ತಾದ ಕೂಡಲೇ ರಾತ್ರೋ ರಾತ್ರಿ ಯಡಿಯೂರಪ್ಪ ಕೂಡ ಬದಲಾಗಿ ಹೋದ್ರು..

ಕುಮಾರಸ್ವಾಮಿ ಜೊತೆ ಕೈಕುಲುಕಿದ ಬಿಎಸ್ ವೈ

ಮೋದಿ, ಶಾ ಗೆ ತಿರುಗೇಟು ಕೊಟ್ಟ ಯಡಿಯೂರಪ್ಪ

ಮೋದಿ,ಅಮಿತ್ ಶಾ ಇಷ್ಟೆಲ್ಲಾ ಮುಖಭಂಗವಾದರೂ ಯಡಿಯೂರಪ್ಪಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಬಿಡದೆ ಜೆಡಿಎಸ್ ಜೊತೆ ಮೈತ್ರಿಗೆ ಮಾತುಕತೆ ಶುರು ಮಾಡಿದ್ರು..  ಈ ವಿಷಯ ಗೊತ್ತಾಗ್ತಿದ್ದ ಹಾಗೆಯೇ ಯಡಿಯೂರಪ್ಪ ತಾವೇ ಗೌಡರಿಗೆ ಫೋನಾಯಿಸಿ ಕುಶಲೋಪರಿ ವಿಚಾರಿಸಿದ್ರು ಈ ವೇಳೆ ಜಾತಕ ಪಕ್ಷಿಯಂತೆ ಕಾಯ್ತಿದ್ದ ಗೌಡರು ಐ ಆಮ್ ವಿಥ್ ಯೂ ಯಡಿಯೂರಪ್ಪಒಳ್ಳೆಯ ಸರ್ಕಾರ ಮಾಡ್ತಿದ್ದೀರ. ಮಾಡಿ ಅಂತ ಹೇಳಿದ್ರುಂತೆ ಇದೇ ಖುಷಿಯಲ್ಲಿ ಖಾಸಗಿ ಕಾರ್ಯಕ್ರಮದ ನೆಪದಲ್ಲಿ ಕುಮಾರಸ್ವಾಮಿ ಭೇಟಿಯಾದ ಯಡಿಯೂರಪ್ಪ ಮೋದಿಗೂ ಮೊದಲೇ ಸೆಟಲ್ ಮೆಂಟ್ ಮಾಡಿಕೊಂಡು ಬಿಟ್ಟಿದ್ದಾರೆ.. ಡಿಕೆಶಿ ಜೈಲು ಸೇರಿದ ಪರಿಣಾಮ ಹಳೇ ಮೈಸೂರಿನಲ್ಲಿ ಜೆಡಿಎಸ್ ಮತಗಳು ಕಾಂಗ್ರೆಸ್ ಸೇರುವುದರ ಜೊತೆ ಒಂದಯಷ್ಟು ಹಾಲಿ ಶಾಸಕರು ಬಿಜೆಪಿ, ಕಾಂಗ್ರೆಸ್ ಪಡಸಾಲೆಯಲ್ಲಿ ಓಡಾಡ್ತಿದ್ರು.. ಈ ಆತಂಕದಲ್ಲಿದ್ದ ಕುಮಾರಸ್ವಾಮಿ ಇದೀಗ ಯಡಿಯೂರಪ್ಪ ಕೈ ಕುಲುಕಿದ ಮೇಲೆ ಖುಷಿಯಾಗಿದ್ದಾರೆ.. ಹೈಕಮಾಂಡ್ ಗೆ ಸೆಡ್ಡು ಹೊಡೆದಿರುವ ಬಿಎಸ್ ವೈ ಅನರ್ಹ ಶಾಸಕರಿಗೆ ಟಿಕೆಟ್ ಕೊಡುವುದರ ಜೊತೆಗೆ ಆಪ್ತ ಯೋಗೀಶ್ವರ್, ಉಮೇಶ್ ಕತ್ತಿ ಹಾಗೂ ರಾಜುಗೌಡರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ.. ಜೊತೆಗೆ ಅನರ್ಹರ ಸಂಪೂರ್ಣ ಹಿತ ಕಾಯಲು ಬದ್ಧಅಂತ ಘಂಟಾಘೋಷವಾಗಿ ಘೋಷಣೆ ಮಾಡಿದ್ದಾರೆ.. ಯಡಿಯೂರಪ್ಪ  ಈ ನಡೆ ಕಂಡು ಸ್ವತಃ ಮೋದಿ, ಅಮಿತ್ ಶಾ ಕಂಗಾಲಾಗಿ ಹೋಗಿದ್ದಾರೆ..

- Advertisement -

Latest Posts

Don't Miss