Political News: ನಟಿ, ನಿರೂಪಕಿ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ವಾರ್ತಾ ನಿರೂಪಕಿಯಾಗಿದ್ದ ಜಾಹ್ನವಿ , ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕ“ಂಡಿದ್ದರು. ಕೆಲ ಸಿನಿಮಾಗಳಲ್ಲೂ ನಟಿಸಿದ್ದರು. ಬಳಿಕ ಬಿಗ್‌ಬಾಸ್‌ಗೂ ಬಂದು ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದರು.
ಇದೀಗ ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಹ್ನವಿ ಹಲವು ನಾಯಕರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮನೋರಂಜನಾ ಕ್ಷೇತ್ರದ ಜತೆ ರಾಜಕೀಯದಲ್ಲೂ ಸಕ್ರೀಯರಾಗಿರಲು ಜಾಹ್ನವಿ ನಿರ್ಧರಿಸಿದ್ದಾರೆ.




