ಕರ್ನಾಟಕ ಟಿವಿ : ಅಂತೂ ಇಂತೂ ಬಿಎಸ್ ವೈ ಸಂಪುಟ ಸೇರಲಿರುವವರ ಲಿಸ್ಟ್ ರೆಡಿಯಾಗಿದೆ.. ಆದ್ರೆ, ಇದು ಸಂಫುಟ ವಿಸ್ತರಣೆಯಲ್ಲಿ ಸಂಪುಟ ಪುನರ್ ರಚನೆ ಅನ್ನೋದು ಸದ್ಯದ ಬ್ರೇಕಿಂಗ್ ನ್ಯೂಸ್.. ಹೌದು, ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ ಸಂಪುಟ ಪುನರ್ ರಚನೆಯಲ್ಲಿ ಸ್ಥಾನ ಸಿಗಲ್ಲ.. ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇರಲ್ಲಿ ಸುಪ್ರೀಂಕೋರ್ಟ್ ನಿಂದ ಅನರ್ಹರಾಗಿದ್ದ 11 ಮಂದು ಗೆಲ್ಲುವ ಮೂಲಕ ಅರ್ಹರಾದ್ರು.. ಇವರಲ್ಲಿ 9 ಮಂದಿ ಬಿಎಸ್ ವೈ ಸಂಪುಟ ಸೇರಿದ್ರೆ ಶ್ರೀಮಂಖತ್ ಪಾಟೀಲ್, ಮಹೇಶ್ ಕುಮಟಳ್ಳಿಗೆ ನಿಗಮ ಮಂಡಳಿ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆಯಂತೆ. ಅರ್ಹರಿಗೆ ಕೊಟ್ಟು ಉಳಿದ 7 ಸ್ಥಾನಗಳು ಮೂಲಕ ಬಿಜೆಪಿ ಶಾಸಕರ ಪಾಲಾಗಲಿದೆ..
ಅರ್ಹ ಶಾಸಕರಲ್ಲಿ ಸಂಪುಟ ಸೇರೋದ್ಯಾರು..?
ರಮೇಶ್ ಜಾರಕಿಹೊಳಿ, ಗೋಕಾಕ್ ಕ್ಷೇತ್ರ
ಬಿ.ಸಿ ಪಾಟೀಲ್, ಹಿರೇಕೆರೂರು ಕ್ಷೇತ್ರ
ಶಿವರಾಮ್ ಹೆಬ್ಬಾರ್, ಯಲ್ಲಾಪುರ ಕ್ಷೇತ್ರ
ಆನಂದ್ ಸಿಂಗ್, ವಿಜಯನಗರ ಕ್ಷೇತ್ರ
ಬೈರತಿ ಬಸವರಾಜು, ಕೆ.ಆರ್ ಪುರಂ ಕ್ಷೇತ್ರ
ಡಾ. ಕೆ ಸುಧಾಕರ್, ಚಿಕ್ಕಬಳ್ಳಾಪುರ
ಎಸ್.ಟಿ ಸೋಮಶೇಖರ್, ಯಶವಂತಪುರ ಕ್ಷೇತ್ರ
ನಾರಾಯಣಗೌಡ, ಕೆ.ಆರ್ ಪೇಟೆ ಕ್ಷೇತ್ರ
ಆರ್, ಶಂಕರ್, ಎಂಎಲ್ ಸಿ ಮಾಡಿ ಸಚಿವ ಸ್ಥಾನ ನೀಡುವುದು
ಬಿಜೆಪಿಯಲ್ಲಿ ಯಾರಿಗೆ ಸಿಗಲಿದೆ 7 ಸಚಿವ ಸ್ಥಾನಗಳು..?
ಉಮೇಶ್ ಕತ್ತಿ, ಹುಕ್ಕೇರಿ ಕ್ಷೇತ್ರ
ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರ
ರಾಜುಗೌಡ, ಸುರಪುರ ಕ್ಷೇತ್ರ
ಅರವಿಂದ ಲಿಂಬಾವಳಿ, ಮಹದೇವಪುರ ಕ್ಷೇತ್ರ
ಸಿ.ಪಿ ಯೋಗೀಶ್ವರ್, ಆಪರೇಷನ್ ಕಮಲದ ರೂವಾರಿ
ತಿಪ್ಪಾರೆಡ್ಡಿ, ಚಿತ್ರದುರ್ಗ ಕ್ಷೇತ್ರ
ಎಂಟಿಬಿ ನಾಗರಾಜ್ ಅಥವಾ ಹೆಚ್ ವಿಶ್ವನಾಥ್ ಇಬ್ಬರಲ್ಲಿ ಒಬ್ಬರು ಸಂಪುಟ ಸೇರುವ ಸಾಧ್ಯತೆ
ಸಂಪುಟದಿಂದ ಯಾರಾಗಬಹುದು ಔಟ್..? ಯಾರಾಗಬಹುದು ಇನ್..?
ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಬದಲು – ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅಥವಾ ಕಾರ್ಕಳ ಶಾಸಕ ಸುನೀಲ್ ಕುಮಾರ್
ಸಚಿವ ಪ್ರಭು ಚವ್ಹಾಣ್ ಬದಲು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅಥವಾ ಹೊಳಲ್ಕೆರೆ ಚಂದ್ರಪ್ಪ
ಶಶಿಕಲಾ ಜೊಲ್ಲೆ ಬದಲು ಹಿರಿಯೂರು ಶಾಸಕಿ ಪೂರ್ಣಿಮಾ ಸಂಫುಟ ಸೇರುವ ಸಾಧ್ಯತೆ
ಸದ್ಯಕ್ಕೆ ಯಡಿಯೂರಪ್ಪ ಸಂಪುಟ ವಿಸ್ತರಣೆ ಬದಲಾಗಿ ಒಂದಷ್ಟು ಸಚಿವರನ್ನ ಕೈಬಿಟ್ಟು ಮುಂಬರುವ ಜಿ.ಪಂ ತಾ.ಪಂ ಚುನಾವಣೆಯ ದೃಷ್ಠಿಯಿಂದ ಪ್ರಬಲರಿಗೆ ಜಾತಿ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.. ಯಡಿಯೂರಪ್ಪ ಮೊದಲ ಕ್ಯಾಬಿನೆಟ್ ಆದಾಗಲು ರಾತ್ರೋರಾತ್ರಿ ಹೆಸರುಗಳು ಬದಲಾಗಿತ್ತು.. ಈಗಲೂ ಸಹ ಕಡೇ ಗಳಿಗೆಯಲ್ಲಿ ಅಚ್ಚರಿಯ ವ್ಯಕ್ತಿಗಳು ಸಂಪುಟ ಸೇರಿದ್ರೂ ಆಶ್ಚರ್ಯವಿಲ್ಲ..
ನಿಮ್ಮ ಪ್ರಕಾರ ಯಾವ ಶಾಸಕರು ಸಂಪುಟ ಸೇರಬೇಕು..? ಈಗ ಯಾವ ಸಚಿವರು ಸಮರ್ಥರಿದ್ದಾರೆ..? ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..