Thursday, December 12, 2024

Latest Posts

ಟಿವಿಎಸ್ ನಿಂದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ..!

- Advertisement -

ಕರ್ನಾಟಕ ಡಿಜಿಟಲ್ : ಭಾರತದ ಜನಪ್ರಿಯ ಟ್ಹೂ ವೀಲ್ಹರ್ ಸ್ಕೂಟರ್ ಕಂಪನಿ ಟಿವಿಎಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.. ದೇಶಾದ್ಯಂತ ಎಲೆಕ್ಟ್ರಕ್ ವಾಹನಗಳ ಜಮಾನ ಶುರುವಾಗ್ತಿರುವ ಬೆನ್ನೆಲೆ ಸ್ಪರ್ಧೆಗೆ ಇಳಿದಿರುವ ಟಿವಿಎಸ್ ಐಕ್ಯೂಬ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ..

ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಲೋಕಪಯೋಗಿ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಯಡಿಯೂರಪ್ಪ ಮೊದಲ ಗ್ರಾಹಕನಿಗೆ ಕೀ ಹಸ್ತಾಂತರಿಸುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ರು.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಏನು..?

ಈ ಸ್ಕೂಟರ್ ಬೆಲೆ 1 ಲಕ್ಷ 15 ಸಾವಿರ

ಗರಿಷ್ಠ ಸ್ಪೀಡ್ 78 ಕಿಲೋಮೀಟರ್

ಒಂದು ಸಾರಿ ಚಾರ್ಜ್ ಮಾಡಿದ್ರೆ 78 ಕೀಲೋಮೀಟರ್ ಓಡುವ ಸಾಮರ್ಥ್ಯ.

ರಿಮೋಟ್ ಮೂಲಕ ಬ್ಯಾಟರಿ ಚಾರ್ಜ್ ಸ್ಟೇಟಸ್ ತಿಳಿದುಕೊಳ್ಳಬಹುದು

ನಾವಿಗೇಷನ್ ಕೂಡ ಲಭ್ಯವಿದೆ

ಕಡೆಯದಾಗಿ ವಾಹನ ಪಾರ್ಕಿಂಗ್ ಮಾಡಿದ ಲೊಕೇಷನ್ ಮೆಸೇಜ್ ಮೊಬೈಲ್ ಗೆ ಬರಲಿದೆ

ಫೋನ್ ಹಾಗೂ ಮೆಸೇಜ್ ಅಲರ್ಟ್ ಡಿಸ್ ಪ್ಲೇ ಲಭ್ಯ

ಇನ್ನು ಟಿವಿಎಸ್ ಐಕ್ಯೂಬ್ ಕೇವಲ ಬಿಳಿ ಬಣ್ಣದಲ್ಲಿ ಮಾತ್ರ ದೊರಕಲಿದೆ. ಇನ್ನು ವೆಬ್ ಸೈಟ್ ಮೂಲಕ ಬೆಂಗಳೂರಿನ ಸೆಲೆಕ್ಟೆಡೆ 10 ಡೀಲರ್ ಗಳ ಬಳಿ ಮಾತ್ರ ಈ ಸ್ಕೂಟರ್ ದೊರೆಯಲಿದ್ದು ಮೊದಲು 5 ಸಾವಿರ ಅಡ್ವಾನ್ಸ್ ಪೇ ಮಾಡಬೇಕು..

ಟಿವಿಎಸ್ ಐಕ್ಯೂಬ್ ಕಂಪ್ಲೀಟ್ ಸ್ವದೇಶಿ ತಂತ್ರಜ್ಞಾನ..

ಇನ್ನು ಟಿವಿಎಸ್ ಕಂಪನಿ ಮುಖ್ಯಸ್ಥ ಶ್ರೀನಿವಾಸ್ ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ರು.. ಐಕ್ಯೂಬ್ ಟೆಕ್ನಾಲಜಿ ಕಂಪ್ಲೀಟ್ ಟಿವಿಎಸ್ ಸಂಸ್ಥೆಯಲ್ಲೇ ಸಂಶೋಧನೆ ಮಾಡಿ ನಿರ್ಮಿಸಲಾಗಿದ್ದು ಭಾರತದ ರಸ್ತೆಗಳಿಗೆ ಹೊಂದಿಕೊಳ್ಳಲಿದ್ದು ಅಡ್ವಾನ್ಸ್ ಟೆಕ್ನಾಲಜಿ ಹೊಂದಿದೆ ಅಂತ ತಿಳಿಸಿದ್ರು.

ಬಜಾಜ್ ಚೇತಕ್ ಎಲೆಕ್ಟ್ರಿಕ್ ವಾಹನಕ್ಕೆ ಟಿವಿಎಸ್ ಐಕ್ಯೂಬ್ ಸವಾಲು..!

ಇನ್ನು ಜನವರಿ ಮೊದಲ ವಾರದಲ್ಲಿ ರಿಲೀಸ್ ಆದ ಬಜಾಜ್ ಚೇತಕ್ ಎಲೆಕ್ಟ್ರಿಕ್ ವಾಹನ ದೆಹಲಿ ಮಾರುಕಟ್ಟೆಯಲ್ಲಿ ಎಕ್ಸ್ ಷೋ ರೂಂ ಬೆಲೆ 1 ಲಕ್ಷವಿದೆ. ಸದ್ಯಕ್ಕೆ ಪುಣೆ, ಬೆಂಗಳೂರಿನಲ್ಲಿ ಮಾತ್ರ ಬಜಾಜ್ ಚೇತಕ್ ದೊರಕುತ್ತಿದೆ.. ಇನ್ನು ಭಾರತದ ನಂಬರ್ 1 ಕಂಪನಿ ಹೀರೋ ಮೋಟರ್ ಕ್ರಾಪ್ ಹಾಗೂ ಎರಡನೇ ಸ್ಥಾನದಲ್ಲಿರುವ ಹೋಂಡಾ ಇನ್ನೂ ಎಲೆಕ್ಟ್ರಿಕ್ ವಾಹನಗಳನ್ನ ಮಾರುಕಟ್ಟೆಗೆ ಬಿಡುಗಡೆಗಳಿಸಿಲ್ಲ.. ಹೀರೋ ಹಾಗೂ ಹೋಂಡಾ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರುವ ಮೊದಲು ಬಜಾಜ್ ಹಾಗೂ ಟಿವಿಎಸ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾಗಿವೆ..

- Advertisement -

Latest Posts

Don't Miss