Friday, November 22, 2024

Latest Posts

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜಾಹುಲಿ ಟೀಮ್ ಆ್ಯಕ್ಟಿವ್ ; ರಾಜ್ಯಾದ್ಯಂತ ಬರ ಪ್ರವಾಸ..!

- Advertisement -

ಬೆಂಗಳೂರು: ಈ ಬಾರಿ ವಾಡಿಕೆಯಷ್ಟು ಮಳೆ ಬಾರದೇ ರಾಜ್ಯದಲ್ಲಿ ಬರಗಾಲ  ತಾಂಡವವಾಡುತ್ತಿದೆ. ಒಂದೆಡೆ ಸರ್ಕಾರವೇನೋ  ಬರಪೀಡಿತ ತಾಲೂಕುಗಳ ಪಟ್ಟಿ ಮಾಡಿದೆ, ಮತ್ತೊಂದೆಡೆ ಕೇಂದ್ರ ಸರ್ಕಾರ  ಪರಿಹಾರ ನೀಡುತ್ತಿಲ್ಲ ಅಂತ ಆರೋಪಿಸುತ್ತಿದೆ. ಈ ನಡುವೆ ವಿಪಕ್ಷ ಬಿಜೆಪಿ ಸಹ ಬರ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂಬ ಆರೋಪ ಜನಸಾಮಾನ್ಯರದ್ದಾಗಿದೆ. ಇದೀಗ ಈ ಆರೋಪ ತೊಡೆದುಹಾಕಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ನವೆಂಬರ್ 3ರಿಂದ ನವೆಂಬರ್ 10ರವರೆಗೆ ರಾಜ್ಯಾದ್ಯಂತ ಬರ ಪ್ರವಾಸ ನಡೆಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಸೇರಿದಂತೆ ಪ್ರಮುಖ ನಾಯಕರ 17 ತಂಡಗಳು ರಾಜ್ಯದ ವಿವಿಧೆಡೆ ಬರ ಪ್ರವಾಸ ನಡೆಸಲಿದೆ.

ನವೆಂಬರ್ 3ರಿಂದ 10ರವರೆಗೆ ಬಿಜೆಪಿ ಬರ ಪ್ರವಾಸ

ಬರ ಅಧ್ಯಯನ ಪ್ರವಾಸಕ್ಕೆ ಮುಂದಾದ ಪ್ರತಿಪಕ್ಷ ಬಿಜೆಪಿ, ನವೆಂಬರ್ 3 ರಿಂದ 10ರವರೆಗೆ ರಾಜ್ಯಾದ್ಯಂತ ಬರ ಪ್ರವಾಸ ಕೈಗೊಳ್ಳಲಿದೆ. 17 ನಾಯಕರ ನೇತೃತ್ವದ ತಂಡಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ನಡೆಸಲು ಯೋಜನೆ ರೂಪಿಸಲಾಗಿದೆ. ಎರಡೆರಡು ತಂಡಗಳು ಎರಡು ಎರಡು ಜಿಲ್ಲೆಗಳಲ್ಲಿ ಬರ ಅಧ್ಯಯನ ಪ್ರವಾಸ ನಡೆಸಲಿದೆ.

ಬರ ಅಧ್ಯಯನ ವರದಿ ಸದನದಲ್ಲಿ ಚರ್ಚೆ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಈಶ್ವರಪ್ಪ, ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಸೇರಿ 17 ನಾಯಕನ್ನರೊಳಗೊಂಡ ತಂಡ ಪ್ರವಾಸ ನಡೆಸಲಿದೆ. ನವೆಂಬರ್ 10ರೊಳಗೆ ಬರ ಅಧ್ಯಯನ ವರದಿ ಸಿದ್ದಪಡಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಅದನ್ನು ಬರುವ ಅಧಿವೇಶನದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

ಯಾರ್ಯಾರ ನೇತೃತ್ವದಲ್ಲಿ ಅಧ್ಯಯನ ತಂಡ?

ನಳೀನ್ ಕುಮಾರ್ ಕಟೀಲ್ ನೇತೃತ್ವದ ತಂಡ – ವಿಜಯಪುರ, ಬಾಗಲಕೋಟೆ, ಮಾಜಿ ಸಿಎಂ ಯಡಿಯೂರಪ್ಪ ಟೀಮ್ – ತುಮಕೂರು, ಬೆಂಗಳೂರು, ಸಿಟಿ ರವಿ ನೇತೃತ್ವದ ತಂಡ – ಚಿಕ್ಕಬಳ್ಳಾಪುರ, ಕೋಲಾರ, ಅರವಿಂದ್ ಬೆಲ್ಲದ್ ತಂಡ – ರಾಯಚೂರು, ಯಾದಗಿರಿ, ಬಿವೈ ವಿಜಯೇಂದ್ರ‌ ತಂಡ- ಬೀದರ್, ಗುಲ್ಬರ್ಗ, ಕೆಎಸ್ ಈಶ್ವರಪ್ಪ ತಂಡ – ಬಳ್ಳಾರಿ, ಕೊಪ್ಪಳ, ಬಿ ಶ್ರೀರಾಮುಲು ತಂಡ- ಹಾವೇರಿ, ಗದಗ, ಅರವಿಂದ್ ಲಿಂಬಾವಳಿ ತಂಡ – ಬೆಳಗಾವಿ, ಚಿಕ್ಕೋಡಿ, ಬಸನಗೌಡ ಪಾಟೀಲ್ ಯತ್ನಾಳ್ ತಂಡ- ಮೈಸೂರು, ಚಾಮರಾಜನಗರದಲ್ಲಿ ಬರ ಅಧ್ಯಯನ ನಡೆಸಲಿದೆ.

ಉಳಿದ ತಂಡಗಳ ವಿವರ

ಸುನೀಲ್ ಕುಮಾರ್ ತಂಡ – ಶಿವಮೊಗ್ಗ, ಉತ್ತರ ಕನ್ನಡ, ಆರಗ ಜ್ಞಾನೇಂದ್ರ ಟೀಂ – ಉಡುಪಿ, ಚಿಕ್ಕಮಗಳೂರು, ವಿಶ್ವೇಶ್ವರ ಹೆಗಡೆ ಕಾಗೇರಿ ಟೀಂ- ದಾವಣಗೆರೆ, ಚಿತ್ರದುರ್ಗ, ಆರ್ ಅಶೋಕ್ ಟೀಂ- ಮಂಗಳೂರು, ಕೊಡಗು, ಡಿವಿ ಸದಾನಂದಗೌಡ ಟೀಂ – ಮಂಡ್ಯ ಹಾಸನ, ಕೋಟಾ ಶ್ರೀನಿವಾಸ್ ಪೂಜಾರಿ ಟೀಂ – ಬೆಂಗಳೂರು ಗ್ರಾಮಾಂತರ, ರಾಮನಗರ, ಗೋವಿಂದ ಕಾರಜೋಳ ಟೀಂ- ವಿಜಯನಗರ, ಧಾರವಾಡದಲ್ಲಿ ಬರ ಅಧ್ಯಯನ ನಡೆಸಲಿದೆ.

ಚುನಾವಣೆ ಮೊದಲು ರಮೇಶ್ ಜಾರಕಿಹೊಳಿ ಡಿಕೆಶಿ ಕಾಲು ಹಿಡಿಯಲು ಬಂದಿದ್ದರು. ರವಿ ಗಣಿಗ..!

ಕನ್ನಡ ಅಧ್ಯಯನದಲ್ಲಿ 9 ಚಿನ್ನದ ಪದಕ: ಚಿನ್ನದ ನಗೆ ಬೀರಿದ ವಿದ್ಯಾರ್ಥಿಗಳು.!

ಕರ್ನಾಟಕದಲ್ಲಿ ಏಕಕಾಲಕ್ಕೆ 75 ಕಡೆ ಲೋಕಾಯುಕ್ತ ದಾಳಿ: ಯಾವೆಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ರೇಡ್? ಇಲ್ಲಿದೆ ಪಟ್ಟಿ

- Advertisement -

Latest Posts

Don't Miss