ನವದೆಹಲಿ : ಪ್ರಧಾನಿ ನರೇಂದ್ರಮೋದಿಗಿಂತ ಅಮಿತ್ ಶಾ ಫುಲ್ ಬ್ಯುಸಿ ಆಗ್ತಿದ್ದಾರೆ. ನಿನ್ನೆ ಭೇಟಿಗೆ ತೆರಳಿದ್ದ ಯಡಿಯೂರಪ್ಪಗೆ ಅಮಿತ್ ಶಾ ಭೇಟಿ ಅನುಮತಿ ಸಿಕ್ಕಿರಲಿಲ್ಲ.. ಹೀಗಾಗಿ ನಿನ್ನೆ ಪ್ರಧಾನಿ ಭೇಟಿಯಾಗಿದ್ದ ಯಡಿಯೂರಪ್ಪ ನಂತರ ಸಂತೋಷ್ ಜೀ ಭೇಟಿಯಾಗಿ ಮಾತುಕತೆ ನಡೆಸಿದ್ರು. ಅಮಿತ್ ಶಾ ಭೇಟಿಯಾಗೋ ವರೆಗೂ ಸಂಪುಟ ವಿಸ್ತರಣೆ ಗ್ಯಾರಂಟಿ ಇರಲಿಲ್ಲ.. ಹೀಗಾಗಿ ನಿನ್ನೆ ದೆಹಲಿಯಲ್ಲೇ ಬೀಡುಬಿಟ್ಟ ಯಡಿಯೂರಪ್ಪ ಇಂದು ಸಂಜೆ ಅಮಿತ್ ಶಾ ಭೇಟಿಯಾಗಿ ಸಚಿವರಾಗುವವರ ಪಟ್ಟಿ ನೀಡಿದ್ರು. ಆದ್ರೆ ಅಮಿತ್ ಶಾ ಯಡಿಯೂರಪ್ಪ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡೀಲ್ಲ.. ಯಾರು ಮಿನಿಸ್ಟರ್ ಆಗಬೇಕು ಅನ್ನೋ ಪಟ್ಟಿಯನ್ನ ನಾವು ಕಳುಹಿಸುತ್ತೇವೆ ನೀವು ಬೆಂಗಳೂರಿಗೆ ವಾಪಸ್ ಆಗಿ ಅಂತ ಹೇಳಿದ್ದಾರೆ..
ಭೇಟಿ ವೇಳೆ ಯಡಿಯೂರಪ್ಪಗೆ ನನ್ನ ಲಿಸ್ಟ್ ಓಕೆ ಆಗುತ್ತೋ ಬಿಡುತ್ತೋ ಅನ್ನೋ ಟೆನ್ಶನ್ ನಡುವೆ ಮಂಗಳವಾರ ಸಚಿವ ಸಂಪುಟ ವಿಸ್ತರಣೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಸಮಾಧಾನ ಮಾಡಿಕೊಂಡು ಬೆಂಗಳೂರು ತಲುಪಿದ್ದಾರೆ.. ಅಲ್ಲದೇ ಮಂಗಳವಾರ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಇದ್ದು ಮಧ್ಯಾಹ್ನ ಸಚಿವ ಸಂಫುಟ ವಿಸ್ತರಣೆ ಆಗಲಿದೆ ಅನ್ನೋದನ್ನ ಟ್ವೀಟ್ ಮೂಲಕ ಸ್ವಷ್ಟಪಡಿಸಿದ್ದಾರೆ..