Dharwad News: ಧಾರವಾಡ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಲಾಠಿ ಚಾರ್ಜ್ ನಡೆದಿದ್ದು, ಈ ವೇಳೆ ಗಾಯಗೊಂಡಿದ್ದ ನಾಗಪ್ಪ ಮುಮ್ಮಿಗಟ್ಟಿ ಎಂಬುವವರು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ.
ಪಂಚಮಸಾಲಿ ಮೀಸಲಾತಿಗಾಗಿ ಸುವರ್ಣಸೌಧದ ಎದುರು ಶಾಂತಿಯುತ ಹೋರಾಟ ಮಾಡುತ್ತಿದ್ದೆವು. ಸ್ಥಳಕ್ಕೆ ಸಿಎಂ ಬರುವಂತೆ ಪಟ್ಟು ಹಿಡಿದ ಸ್ವಾಮೀಜಿಯಿಂದ ರಸ್ತೆ ತಡೆ ಮಾಡಲಾಯಿತು. ಸ್ವಾಮೀಜಿಗಳು, ಬೆಳಗಾವಿಯ ಸುವರ್ಣ ಸೌಧ ಎದುರಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಏಕಾಏಕಿ ಪೊಲೀಸರಿಂದ ಪ್ರತಿಭಟನಾನಿರತರ ಮೇಲೆ ಲಾಠಿ ಪ್ರಹಾರ ನಡೆಯಿತು. ಈ ವೇಳೆ ನಾನು ಸ್ವಾಮೀಜಿಗಳ ರಕ್ಷಣೆಗೆ ನಿಂತೆ. ಹೀಗಾಗಿ ನನಗೆ ತಲೆಗೆ ಮತ್ತು ಕಾಲಿಗೆ ಲಾಠಿ ಏಟು ಬಿತ್ತು ಎಂದು ನಾಗಪ್ಪ ಹೇಳಿದ್ದಾರೆ.
ತಲೆಗೆ ಗಂಭೀರವಾಗಿ ಗಾಯವಾದ ಹಿನ್ನೆಲೆ ನಾಗಪ್ಪರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ತಲೆಗೆ ಮೂರು ಹೊಲಿಗೆ, ಕಾಲಿಗೆ ಚಿಕಿತ್ಸೆ ನೀಡಲಾಯಿತು. ನಮ್ಮದು ಶಾಂತಿಯುತ ಹೋರಾಟವಿತ್ತು. ಆದ್ರೆ ನಮ್ಮ ಹೋರಾಟದ ಮೇಲೆ ರಾಜಕೀಯ ದುರುದ್ದೇಶದಿಂದ ಲಾಠಿ ಪ್ರಹಾರ ಮಾಡಲಾಯಿತು. ಲಕ್ಷಾಂತರ ಜನ ಇಂದಿನ ಹೋರಾಟದಲ್ಲಿ ಭಾಗಿಯಾಗಿದ್ದರು. ಮುಂದೆ ನಮ್ಮ ಹೋರಾಟ ತೀವ್ರಗೊಂಡು ಮನೆಗೆ ಹತ್ತು ಜನ ಸೇರಿ ಮೀಸಲಾತಿ ಪಡೆದು ತಿರುತ್ತೇವೆ ಎಂದು ನಾಗಪ್ಪ ಮುಮ್ಮಿಗಟ್ಟಿ ಹೇಳಿದ್ದಾರೆ.