- Advertisement -
State News: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ 7ನೇ ಬಜೆಟ್ ಮಂಡಿಸಿ ಕರುನಾಡನ್ನು ಮಾಡೆಲ್ ರಾಜ್ಯವಾಗಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ಇದರ ಅನ್ವಯ ಅನೇಕ ಜನಪರ ಯೋಜನೆಗಳನ್ನು ಘೋಷಣೆ ಮಾಡಿದರು. ಬಹು ಮುಖ್ಯವಾಗಿ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಗಾಗಿ 10 ಕೋಟಿ ಮೀಸಲಿಡುವುದಾಗಿ ಹೇಳಿದರು.ಈ ಯೋಜನೆಯ ಸಲುವಾಗಿ ಅನೇಕರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಬಾರದೆಂದು ಬಿಪಿಎಲ್ ದಾರರಿಗೂ 10 ಕೆಜಿ ಅನ್ನಭಾಗ್ಯ ಯೋಜನೆ ದೊರೆಯುವಂತೆ ಮಾಡಲಾಗುವುದು ಎಂದರು.
ಹೌದು ಅತೀ ನಿರೀಕ್ಷಿತ ರಾಜ್ಯದ ಬಜೆಟ್ ನ್ನು ಇಂದು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿ ಅನೇಕ ಜನಪರ ಯೋಜನೆಗಳನ್ನು ಘೋಷಣೆ ಮಾಡಿದರು. ಕೇಂದ್ರ ಇದುವರೆಗೂ ಗುರುತಿಸದೇ ಇರುವಂತಹ 4.42 ಕೋಟಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 40 ಲಕ್ಷ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ನಿರ್ಧಾರ ಮಾಡಿದೆ.
- Advertisement -