Saturday, October 19, 2024

Latest Posts

ಬಜೆಟ್ ನ ಯಾವುದೇ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ..!: ಸಿದ್ದರಾಮಯ್ಯ

- Advertisement -

Budget News:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಮಲಾ ಸೀತಾರಾಮನ್  ಮಂಡಿಸಿದ ಬಜೆಟ್ 2023 ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆಧಿಕಾರಾವಧಿಯ ಕೊನೆಯ ಬಜೆಟ್ ಅಗಿದ್ದರೂ ಅದರಲ್ಲಿ ಜನ ಖುಷಿಪಟ್ಟುಕೊಳ್ಳುವಂಥದ್ದೇನೂ ಇಲ್ಲ. 2014ರಲ್ಲಿ ಮನಮೋಹನ್ ಸಿಂಗ್   ಪ್ರಧಾನಿಯಾಗಿದ್ದ ಅವಧಿಯ ಕೊನೆ ವರ್ಷದಲ್ಲಿ  ಭಾರತದ ಮೇಲೆ ರೂ. 54.90 ಲಕ್ಷ ಕೋಟಿ ಸಾಲವಿತ್ತು. ಆದರೆ, ಪ್ರಧಾನಿ ಮೋದಿ 10 ವರ್ಷಗಳ ಆಧಿಕಾರದಲ್ಲಿ ಸಾಲದ ಮೊತ್ತ ರೂ 118 ಲಕ್ಷ ಕೋಟಿ ತಲುಪಿದೆ ಎಂದು ಸಿದ್ದರಾಮಯ್ಯ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಮೀಸಲಿಟ್ಟಿರುವ ಬಗ್ಗೆ ವಿತ್ತೀಯ ಸಚಿವರು ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಬಿಡುಗಡೆ ಮಾಡದೆ ಆ ಹಣವನ್ನು ಯೋಜನೆಗೆ ಖರ್ಚು  ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ಕಾರಣಕ್ಕೆ ಹಿಂದೆ ಮಹಾದಾಯಿ ಯೋಜನೆಗೆ ರೂ.1000 ಕೋಟಿ ಬಿಡುಗಡೆ ಮಾಡಲಾಗಿದ್ದರೂ ಒಂದು ರೂಪಾಯಿಯನ್ನಾದರೂ ರಾಜ್ಯ ಸರ್ಕಾರ ಖರ್ಚು ಮಾಡಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ ಬಜೆಟ್:ತೇಜಸ್ವಿ ಸೂರ್ಯ

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ

ಇದೊಂದು ಅದ್ಭುತವಾದ ಬಜೆಟ್: ಬಿಎಸ್ ವೈ

- Advertisement -

Latest Posts

Don't Miss