www.karnatakatv.net :ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಣಚಿನಮರ್ಡಿ ಗ್ರಾಮದ ಮಾಜಿ ಸೈನಿಕ ಯಮನಪ್ಪಾ ಮಾಳಿಗಿ ಇವರಿಗೆ ಸೇರಿದ ಎತ್ತುಗಳನ್ನ 8 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಗೋಕಾಕನಲ್ಲಿಯೇ ಅತೀ ದುಬಾರಿ ಬೆಲೆಗೆ ಮಾರಿದ ಹೆಗ್ಗಳಿಕೆಗೆ ಪಾತ್ರವಾಗಿವೆ.
ಈ ಎತ್ತುಗಳನ್ನು ಮನೆಯಲ್ಲಿಯೇ ಕಟ್ಟಿ, ಸಿದ್ಧಪಡಿಸಿದ ಭತ್ತದ ಹುಲ್ಲಿನಿಂದ ಮೆತ್ತನೆ ಹಾಸಿಗೆ ನಿರ್ಮಿಸಲಾಗುತ್ತದೆ. ಇದರಿಂದ ಇಲ್ಲಿಯವರೆಗೆ ಬಹಳ ಜೋಪಾನವಾಗಿ ಈ ಎತ್ತುಗಳನ್ನ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ದುಬಾರಿ ಬೆಲೆ ಎತ್ತುಗಳನ್ನು ಕಟ್ಟಲು ಹೈಟೆಕ್ ಮಾದರಿಯ ಪೆಂಡಾಲ್ ಹಾಕಲಾಗಿತ್ತು.
ಈ ಎತ್ತುಗಳನ್ನು ಸುಮಾರು 8 ಲಕ್ಷ ಮೌಲ್ಯದಿಂದ ಖರೀದಿ ಮಾಡಲು ಮಹಾರಾಷ್ಟ್ರದ ಸತಾರ ಎಂಬ ಗ್ರಾಮದಿಂದ ಬಂದಿರುವುದಾಗಿ ಎತ್ತಿನ ಮಾಲಿಕ ಯಮನಪ್ಪ ಮಾಳಿಗಿ ಹೇಳಿದ್ದಾರೆ. ಬೇಸಾಯದ ಕೆಲಸಗಳಲ್ಲಿ ಬಳಸುವ ಎತ್ತುಗಳು ಬಹಳ ಮುಖ್ಯ ಆದರೆ ಈಗಿನ ಜನತೆ ಎತ್ತುಗಳನ್ನು ಬಳಕೆ ಮಾಡವುದಿಲ್ಲ ಎಂದು ಹೇಳಿದರು. ಆದರೆ ನಾವು ಕೂಡ ಹೆಮ್ಮೆಯ ಎತ್ತುಗಳನ್ನು ಬೆಳೆಸಿ ಮಾರಾಟ ಮಾಡಿದ್ದು ಬಹಳಷ್ಟು ಸಂತೋಷವಾಗಿದೆ ಎಂದು ತಿಳಿಸಿದರು. ಹಾಗೇಯೆ ಊರಿನ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆ ಮಾಡಿದರು ಇದೇ ಸಂದರ್ಭದಲ್ಲಿ ಊರಿನ ಹಿರಿಯರು ಉಪಸ್ಥಿತರಿದ್ದರು.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ