Karkala News : ಶಿರ್ವ ರೋಟರಿ ಕ್ಲಬ್ ವತಿಯಿಂದ ಬಂಟಕಲ್ಲು ರೋಟರಿ ಭವನದಲ್ಲಿ ಜರುಗಿದ ದೇಶದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಮೊಹಮ್ಮದ್ ಫಾರೂಖ್ ರಾಷ್ಟ್ರಧ್ವಜ ಅರಳಿಸಿ ಶುಭ ಹಾರೈಸಿದರು.
ಶಿರ್ವ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಬಂಟಕಲ್ಲು ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್ ಸಂದೇಶ ನೀಡಿದರು. ನಿವೃತ್ತ ಯೋಧ ಹೆರಾಲ್ಟ್ ಕುಟಿನೊ, ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ, ರೋಟರ್ಯಾಕ್ಟ್ ಅದ್ಯಕ್ಷ ಗೊಡ್ವಿನ್ ಮೋನಿಸ್ ವೇದಿಕೆಯಲ್ಲಿದ್ದರು.
ಹಿರಿಯ ಸದಸ್ಯ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ, ಮಾಜಿ ಅಧ್ಯಕ್ಷರುಗಳಾದ ಡಾ.ವಿಟ್ಠಲ್ ನಾಯಕ್, ಲೂಕಾಸ್ ಡಿಸೋಜ, ರಘುಪತಿ ಐತಾಳ್, ರೋಟರ್ಯಾಕ್ಟ್ ವಲಯ ಪ್ರತಿನಿಧಿ ಜಾಕ್ಸನ್ ಕಬ್ರಾಲ್, ನಿಯೋಜಿತ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ, ವಿಲಿಯಮ್ ಮಚಾದೊ, ದಿನೇಶ್ ಕುಲಾಲ್, ಶಶಿಕಲಾ ಕುಲಾಲ್, ಉಷಾ ಮರಾಠೆ ಮತ್ತಿತರರು ಉಪಸ್ಥಿತರಿದ್ದರು.
Shirva School : ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ
Hospital : ಶಿರ್ವ : ಸಮುದಾಯ ಆರೋಗ್ಯ ಕೇಂದ್ರದ ರಾತ್ರಿ ತುರ್ತು ಚಿಕಿತ್ಸೆ ಪಾಳಿಗೆ ಚಾಲನೆ ನೀಡಿದ ಶಾಸಕರು