ಹೂವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೂವನ್ನ ಇಷ್ಟಪಡದ ಹೆಣ್ಣಿಲ್ಲ. ದೇವರಿಗೆ ಪೂಜಿಸುವಾಗ ಹೂವಿನ ಅಗತ್ಯವಿದೆ. ಮದುವೆ ಮನೆ, ಗೃಹ ಪ್ರವೇಶಕ್ಕೆ ಮನೆಯನ್ನ ಅಲಂಕರಿಸಲು ಹೂವು ಬೇಕು. ಇಷ್ಟೆಲ್ಲ ಪ್ರಯೋಜನವಿರುವ ಹೂವಿನ ವ್ಯಾಪಾರವನ್ನ ಶುರು ಮಾಡಿದ್ರೆ ಎಷ್ಟು ಲಾಭವಾಗತ್ತೆ ಅಲ್ವಾ. ಅಂಥ ಲಾಭಗಳಿಸಲು ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.

ಮಾರುಕಟ್ಟೆಯಲ್ಲಿ ಒಂದು ಚಿಕ್ಕ ಅಂಗಡಿಯನ್ನು ಬಾಡಿಗೆಗೆ ಪಡೆದು ನೀವು ಹೂವಿನ ವ್ಯಾಪಾರ ಶುರು ಮಾಡಬಹುದು. ಸಾಮಾನ್ಯವಾಗಿ ಬಿಡಿ ಬಿಡಿಯಾದ ಹೂವು, ಹೂವಿನ ಮಾಲೆ ಎಲ್ಲರೂ ಮಾರ್ತಾರೆ. ಆದ್ರೆ ನೀವು ವಿವಿಧ ತರಹದ ಗುಲಾಬಿ ಹೂವು, ಫ್ಲವರ್ ಡೆಕೋರೇಷನ್, ಬೊಕ್ಕೆ ಮಾಡಲು ಬಳಸುವಂಥ ಹೂವನ್ನ ಮಾರಾಟ ಮಾಡಿ. ನೀವು ಬೊಕ್ಕೆ ಮಾಡಲು ಕಲಿತು, ಅಂಥ ಹೂವಿನಿಂದ ಬೊಕ್ಕೆ ಮಾರಾಟ ಮಾಡಬಹುದು.
ಅಲ್ಲದೇ, ಮದುವೆ ಮನೆ, ಮುಂಜಿ, ಗೃಹಪ್ರವೇಶ, ಬರ್ತ್‌ಡೇ ಪಾರ್ಟಿ ಇತ್ಯಾದಿ ಕಾರ್ಯಕ್ರಮಗಳಿಗೆ ಮನೆಯನ್ನ ಸಿಂಗರಿಸಲು ತರಹೇವಾರಿ ಹೂವಿನ ಅವಶ್ಯಕತೆ ಇರುತ್ತದೆ. ಅಂಥ ಹೂವಿನ ಮಾರಾಟದಿಂದ ಉತ್ತಮ ಲಾಭ ಗಳಿಸಬಹುದು. ಅದರಲ್ಲೂ ಮದುವೆ ಸೀಸನ್‌ನಲ್ಲಿ ಸಖತ್ ಪ್ರಾಫಿಟ್ ಗಳಿಸಬಹುದು.
ಫ್ಲವರ್ ಡೆಕೋರೇಷನ್ ಮಾಡುವವರು, ವೆಡ್ಡಿಂಗ್ ಪ್ಲಾನರ್ ಜೊತೆ ಸೇರಿ ಈ ಉದ್ಯಮದಲ್ಲಿ ಹೆಚ್ಚಿನ ಲಾಭ ಗಳಿಸಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.