Sunday, September 8, 2024

Latest Posts

ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳಿವು..!

- Advertisement -

ಹೆಣ್ಣಿನ ಜೀವನ ಮದುವೆಯ ಮುಂಚೆ ಒಂದು ರೀತಿ ಇದ್ದರೆ ಮದುವೆಯ ಬಳಿಕ ಒಂದು ರೀತಿ ಇರುತ್ತದೆ. ಮದುವೆಯ ಮುಂಜೆ ಜೀವನ ಎಂಜಾಯ್ ಮಾಡುವಷ್ಟು ಸಮಯ ಮದುವೆಯ ಬಳಿಕ ಇರುವುದಿಲ್ಲ. ಗಂಡ ಮಕ್ಕಳು ಅತ್ತೆ ಮಾವ ಇವರೆಲ್ಲರ ಕಾಳಜಿ ಮಾಡುವುದರಲ್ಲಿಯೇ ಆಕೆಯ ಸಮಯ ಕಳೆದು ಹೋಗುತ್ತದೆ. ಆದ್ರೆ ಇದೇ ಸಮಯದಲ್ಲಿ ಕೆಲ ಹೊತ್ತು ತನಗಾಗಿ ಮೀಸಲಿಟ್ಟರೆ, ಆಕೆ ಆರಾಮವಾಗಿ ತನ್ನ ಖರ್ಚನ್ನು ನಿಭಾಯಿಸುವಷ್ಟು ದುಡಿಯಬಲ್ಲಳು. ಹಾಗಾದ್ರೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳು ಯಾವುದು ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಬ್ಲಾಗರ್: ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಒಳ್ಳೆಯ ಆರ್ಟಿಕಲ್ ಬರೆಯುವ ಕಲೆ ಹೊಂದಿದ್ದರೆ ಬ್ಲಾಗರ್ ಆಗಬಹುದು. ನಿಮ್ಮದೇ ಆದ ಬ್ಲಾಗ್ ಓಪೆನ್ ಮಾಡಿ, ಅದರಲ್ಲಿ ಫ್ಯಾಷನ್, ಕುಕಿಂಗ್, ಇತ್ಯಾದಿ ವಿಷಯಗಳ ಬಗ್ಗೆ ಆರ್ಟಿಕಲ್ ಬರಿಯಬಹುದು.

ಬ್ಯೂಟಿಷಿಯನ್: ನೀವು ಮೇಕಪ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದರೆ, ಮನೆಯಲ್ಲೇ ಬ್ಯೂಟಿಪಾರ್ಲರ್ ಓಪೆನ್ ಮಾಡಬಹುದು. ಅಥವಾ ಮೇಕಪ್ ಮಾಡಿಸಿಕೊಳ್ಳಲು ಇಚ್ಛಿಸುವವರನ್ನ ಮನೆಗೇ ಕರೆಸಿ ಮೇಕಪ್ ಮಾಡಿ ಕಳುಹಿಸಬಹುದು. ನಿಮ್ಮ ಮೇಕಪ್ ಸೂಪರ್ ಆಗಿದ್ದಲ್ಲಿ ಬಾಯಿ ಮಾತಿನಿಂದಲೇ ನಿಮಗೆ ಪ್ರಚಾರ ಸಿಗುತ್ತದೆ.

ಬ್ಯಾಗ್ ಮಾಡಿ ಮಾರುವುದು: ಈಗ ಪ್ಲಾಸ್ಟಿಕ್ ಬ್ಯಾಗ್‌ಗಳು ಬ್ಯಾನ್ ಆಗಿರುವುದರಿಂದ ಬಟ್ಟೆ ಬ್ಯಾಗ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ನೀವು ಕೂಡ ಬಟ್ಟೆ ಬ್ಯಾಗ್ ತಯಾರಿಸಿ ಮಾರಬಹುದು. ಕೆಲ ಗೃಹಿಣಿಯರು ವಾಯರ್ ಬ್ಯಾಗ್, ಬಟ್ಟೆಯಿಂದ ವ್ಯಾನಿಟಿ ಬ್ಯಾಗ್ ತಯಾರಿಸಿ ಮಾರ್ತಾರೆ. ಆ ರೀತಿ ಕೂಡ ನೀವು ಮಾರಬಹುದು. ಈ ಕೆಲಸಕ್ಕೆ ಸೋಶಿಯಲ್ ಮೀಡಿಯಾ ಸಹಾಯ ತೆಗೆದುಕೊಳ್ಳುವುದು ಉತ್ತಮ.

ಪೇಂಟಿಂಗ್, ಡಾನ್ಸಿಂಗ್, ಮ್ಯೂಸಿಕ್ ಕ್ಲಾಸ್, ಟ್ಯೂಷನ್: ಈಗಂತೂ ಪೋಷಕರು ಎಷ್ಟು ಬೇಕದ್ರೂ ಫೀಸ್ ಕೊಟ್ಟು ಈ ಎಲ್ಲ ಕ್ಲಾಸ್‌ಗಳಿಗೆ ಕಳಿಸ್ತಾರೆ. ನೀವು ಏನಾದ್ರೂ ಒಳ್ಳೆ ಶಿಕ್ಷಣ ಕೊಡುವ ಅರ್ಹತೆ ಹೊಂದಿದ್ದರೆ ಟ್ಯೂಶನ್ ತೆಗೆದುಕೊಳ್ಳಿ. ಸಂಜೆ ವೇಳೆ ಮನೆ ಕೆಲಸವೆಲ್ಲ ಮುಗಿಸಿ, ಇಂತಿಷ್ಟು ಗಂಟೆ ಟ್ಯೂಷನ್‌ಗಾಗಿ ಮೀಸಲಿಡಿ. ಅಲ್ಲದೇ ನೀವು ಸಂಗೀತ, ನೃತ್ಯ, ಚಿತ್ರಕಲೆಯಲ್ಲಿ ಪರಿಣತಿ ಹೊಂದಿದ್ದರೆ, ಅಂತಹ ಕ್ಲಾಸ್‌ಗಳನ್ನ ವಾರದಲ್ಲಿ 2 ದಿನ ಇಟ್ಟರೂ ಸಾಕು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss