ನೀವು ಒಂದೇ ಒಂದು ಮಷಿನ್ ಪರ್ಚೆಸ್ ಮಾಡಿದ್ರೆ ಸಾಕು, ಅದರಿಂದ ಲಕ್ಷ ಲಕ್ಷ ಲಾಭ ಬರುವ ವ್ಯಾಪಾರ ಮಾಡಬಹುದು. ಯಾವುದು ಆ ವ್ಯಾಪಾರ ಅಂದ್ರಾ..? ಅದೇ ಎಣ್ಣೆ ವ್ಯಾಪಾರ.

ಒಂದೇ ಒಂದು ಮಷಿನ್ ಇದ್ರೆ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಸೋಯಾಬಿನ್ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಬಾದಾಮ್ ಎಣ್ಣೆ ಹೀಗೆ ಹಲವು ಥರದ ಎಣ್ಣೆಯನ್ನ ಮಾಡಿ, ಬಾಟಲ್‌ನಲ್ಲಿ ತುಂಬಿಸಿ ಮಾರಬಹುದು.
ಇನ್ನು ಮೂರು ರೀತಿಯಲ್ಲಿ ಬರುವ ಈ ಎಣ್ಣೆ ಮಷಿನ್ ಬೆಲೆ ಒಂದು ಲಕ್ಷ ಎಪ್ಪತ್ತೈದು ಸಾವಿರದಿಂದ ಶುರುವಾಗತ್ತೆ. ಎರಡುವರೆ ಲಕ್ಷ, ಎರಡು ಲಕ್ಷದ ಇಪ್ಪತ್ತೆರಡು ಸಾವಿರ ರೂಪಾಯಿಯ ಮಷಿನ್ ಕೂಡಾ ಲಭ್ಯವಿರುತ್ತದೆ. ಇದರ ಜೊತೆ ಜಿಎಸ್‌ಟಿ ಚಾರ್ಜ್ ಕೂಡಾ ಆ್ಯಡ್ ಆಗತ್ತೆ.
ನಿಮ್ಮ ಮನೆಯ ಒಂದು ದೊಡ್ಡ ಕೋಣೆಯಲ್ಲಿ ಆಯಿಲ್ ಮಿಲ್ ಮಾಡಿಕೊಂಡು ಈ ವ್ಯಾಪಾರವನ್ನು ನೀವು ಶುರು ಮಾಡಬಹುದು. ಅಡುಗೆ ಮಾಡುವಾಗ ಎಣ್ಣೆಯ ಉಪಯೋಗವಂತೂ ಮಾಡೇ ಮಾಡ್ತೇವೆ. ಹಾಗಾಗಿ ಎಣ್ಣೆಯ ವ್ಯಾಪಾರ ಉತ್ತವಾಗಿ ಸಾಗತ್ತೆ. ಅಲ್ಲದೇ ತಲೆಗೆ ಹಚ್ಚಲು ಹಲವರು ತೆಂಗಿನ ಎಣ್ಣೆಯ ಬಳಕೆ ಮಾಡ್ತಾರೆ. ಇದು ಆರೋಗ್ಯಕರ ಮತ್ತು ಸೌಂದರ್ಯಕರವೂ ಆಗಿದೆ. ಹಾಗಾಗಿ ತೆಂಗಿನ ಎಣ್ಣೆಯನ್ನ ಹಲವರು ಖರೀದಿಸೋಕ್ಕೆ ಇಷ್ಟ ಪಡ್ತಾರೆ.
ಇನ್ನು ಕೆಲವರು ದೇವರಿಗೆ ದೀಪ ಹಚ್ಚುವಾಗ ಎಳ್ಳೆಣ್ಣೆಯನ್ನ ಬಳಸುತ್ತಾರೆ. ಹಾಗಾಗಿ ಎಳ್ಳೆಣ್ಣೆ ವ್ಯಾಪಾರ ಕೂಡಾ ಲಾಭ ತರುವಂಥದ್ದು. ಇನ್ನು ಚಳಿಗಾಲದಲ್ಲಿ ಸಾಸಿವೆ ಎಣ್ಣೆಯನ್ನ ಹೆಚ್ಚಿಗೆ ಪ್ರಮಾಣದಲ್ಲಿ ಬಳಸುವುದರಿಂದ, ಈ ಕಾಲದಲ್ಲಿ ಸಾಸಿವೆ ಎಣ್ಣೆಯ ವ್ಯಾಪಾರವೂ ಲಾಭಕರವಾಗಿದೆ.
ಇನ್ನು ಬಾಟಲ್‌ನಲ್ಲಿ ಈ ಎಣ್ಣೆಯನ್ನ ಹಾಕಿ, ನಿಮ್ಮ ಬ್ರ್ಯಾಂಡ್‌ನ ಸ್ಟಿಕ್ಕರ್‌ನ್ನ ಅಂಟಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ನಿಮ್ಮ ವ್ಯಾಪಾರ ಒಮ್ಮೆ ಲಾಭ ಗಳಿಸಲು ಶುರು ಮಾಡಿದಾಗ, 3ರಿಂದ 4 ಎಣ್ಣೆ ಮಷಿನ್‌ನ್ನು ಖರೀದಿಸಿ, ಇಬ್ಬರು ಕೆಲಸಗಾರರನ್ನು ಇಟ್ಟುಕೊಂಡು ಇನ್ನೂ ದೊಡ್ಡಮಟ್ಟದಲ್ಲಿ ಎಣ್ಣೆಯ ವ್ಯಾಪಾರ ಮಾಡಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.