ಇವತ್ತು ನಾವು ಸ್ಲೀಪ್ಪರ್ ಮೇಕಿಂಗ್ ಮಷಿನ್ ಬಳಸಿ ಯಾವ ಯಾವ ರೀತಿಯ ಚಪ್ಪಲಿಗಳನ್ನ ತಯಾರಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ.

ಚಪ್ಪಲಿ ತಯಾರಿಸಿ ಉದ್ಯಮ ಶುರು ಮಾಡಬೇಕು ಎನ್ನುವರು ಈ ಮಷಿನ ಪರ್ಚೇಸ್ ಮಾಡಿ. ಈ ಮಷಿನ್ ಮತ್ತು ಕೆಲ ರಾ ಮಟೀರಿಯಲ್ಸ್ ಅಂದ್ರೆ ಚಪ್ಪಲಿ ಮಾಡೋಕ್ಕೆ ಕಲ ಶೀಟ್‌ಗಳ ಅವಶ್ಯಕತೆ ಇರುತ್ತೆ ಅದನ್ನೆಲ್ಲ ಕೊಂಡುಕೊಳ್ಳಬೇಕಾಗತ್ತೆ. ಇದೆಲ್ಲದಕ್ಕೂ ಸೇರಿಸಿ, 25 ಸಾವಿರ ಬಂಡವಾಳ ಹೂಡಬೇಕಾಗುತ್ತದೆ.
ಆಯಾ ಚಪ್ಪಲಿ ಸೈಸ್‌ಗಳ ಅಚ್ಚು, ರಬ್ಬರ್ ಶೀಟ್ ಮತ್ತು ಚಪ್ಪಲಿಗೆ ಬೇಕಾಗಿರುವ ಕೆಲ ವಸ್ತುಗಳನ್ನ ತೆಗೆದುಕೊಂಡು ಮಷಿನ್‌ನಲ್ಲಿ ಹಾಕಿದರೆ, ರಬ್ಬರ್ ಶೀಟ್ ಚಪ್ಪಲಿ ಆಕಾರಕ್ಕೆ ಕಟ್ ಆಗುತ್ತದೆ. ಈಗ ಕಟ್ ಆದ ಚಪ್ಪಲಿಯಾಕಾರದ ರಬ್ಬರ್ ಶೀಟ್‌ದಗೆ ಸ್ಲಿಪ್ಪರ್ ಸ್ಟ್ರ್ಯಾಪ್ ಅಳವಡಿಸಬೇಕಾಗುತ್ತದೆ. ಈಗ ಸ್ಲಿಪ್ಪರ್ ರೆಡಿ.
ನೀವು ರೆಡಿ ಮಾಡುವ ಸ್ಲೀಪ್ಪರ್‌ಗಳು ಒಳ್ಳೆ ಕ್ವಾಲಿಟಿಯದ್ದಾಗಿರಬೇಕು. ಮಳೆಗಾಲದಲ್ಲಿ ಹಾಕಿಕೊಳ್ಳಲು ಉತ್ತಮವಾಗಿರಬೇಕು. ನಿಮ್ಮ ಪ್ರಾಡಕ್ಟ್ ಕ್ವಾಲಿಟಿ ಒಳ್ಳೆಯದಿದ್ದಲ್ಲಿ, ಜನ ನಿಮ್ಮ ಪ್ರಾಡಕ್ಟ್ ಖರೀದಿ ಮಾಡಲು ಮುಂದಾಗ್ತಾರೆ.
ಅಲ್ಲದೇ ಸಿಂಪಲ್ ಸ್ಲಿಪರ್‌ನಲ್ಲೇ ತರಹ ತರಹದ ಪ್ರಯೋಗವನ್ನ ಮಾಡಿ. ಸ್ಲಿಪ್ಪರ್ ನೋಡೋಕ್ಕೆ ಸ್ಟೈಲಿಶ್, ಸಿಂಪಲ್, ಬೆಸ್ಟ್ ಕ್ವಾಲಿಟಿಯದ್ದಾಗಿದ್ರೆ ಜನ ಅಂಥಾ ಪ್ರಾಡಕ್ಟ್ ಇಷ್ಟಪಡ್ತಾರೆ.
ಇನ್ನು ನಿಮ್ಮ ಪ್ರಾಡಕ್ಟ್‌ನ ಪ್ರಚಾರವನ್ನ ಆನ್‌ಲೈನ್ ಮೂಲಕ ಶುರು ಮಾಡಬಹುದು. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಪೇಜ್, ವಾಟ್ಸ್‌ಪ್ ಗ್ರೂಪ್‌ನಲ್ಲಿ ನೀವು ತಯಾರಿಸಿದ ಸ್ಲಿಪ್ಪರ್ ಫೋಟೋಗಳನ್ನ ಹಾಕಿ. ಅದರ ಜೊತೆ ನಿಮ್ಮ ಮಾಹಿತಿಯನ್ನ ಕೂಡ ಹಾಕಿ. ನಿಮ್ಮ ಪ್ರಾಡಕ್ಟ್ ಇಷ್ಟಾ ಆದವರು ಅದನ್ನ ಆನ್‌ಲೈನ್ ಮೂಲಕ ಖರೀದಿ ಮಾಡುವ ಅನುಕೂಲವನ್ನ ಕೂಡ ನೀವು ಮಾಡಿಕೊಡಬೇಕಾಗುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ





