ಮೊಬೈಲ್ ಶಾಪ್ : ಈಗಂತೂ ಜನ ವರ್ಷಕ್ಕೊಮ್ಮೆ ಮೊಬೈಲ್ ಪರ್ಚೇಸ್ ಮಾಡ್ತಾನೆ ಇರ್ತಾರೆ. ಮಾರುಕಟ್ಟೆಯಲ್ಲೂ ಅದಕ್ಕೆ ತಕ್ಕಂತೆ ಹಲವಾರು ಕಂಪನಿಗಳು ವಿವಿಧ ತರಹದ ಮೊಬೈಲ್ ರಿಲೀಸ್ ಮಾಡತ್ತೆ. ಹಾಗಾಗಿ ಮೊಬೈಲ್ ಶಾಪ್ ತೆರೆಯಬಹುದು. ಇನ್ನು ನಮ್ಮ ಜೀವನದ ಭಾಗವಾಗಿ ಹೋಗಿರುವ ಮೊಬೈಲ್‌ಗೆ ಏನಾದ್ರೂ ಸಮಸ್ಯೆ ಆದ್ರೆ, ತಕ್ಷಣ ಅದನ್ನ ರಿಪೇರಿ ಮಾಡ್ಸೋಕ್ಕೆ ಓಡ್ತೀವಿ. ನೀವು ಮೊಬೈಲ್‌ನಲ್ಲಿ ಆಗೋ ಸಮಸ್ಯೆನಾ ಸರಿಪಡಿಸೋದ್ರಲ್ಲಿ ನಿಸ್ಸೀಮರಾಗಿದ್ರೆ, ಮೊಬೈಲ್ ರಿಪೇರಿ ಶಾಪ್ ಓಪನ್ ಮಾಡಬಹುದು.

ವೆಡ್ಡಿಂಗ್ ಪ್ಲಾನರ್: ಇಂದಿನ ಶ್ರೀಮಂತರು ತಮ್ಮ ಮನೆಯ ಮದುವೆ ಕಾರ್ಯಗಳಿಗೆ ವೆಡ್ಡಿಂಗ್ ಪ್ಲಾನರ್‌ಗಳನ್ನ ಹುಡುಕ್ತಾರೆ. ಎಲ್ಲ ಕೆಲಸಗಳನ್ನ ಅವರಿಗೇ ವಹಿಸಿಬಿಡ್ತಾರೆ. ಕೊಟ್ಟ ಕೆಲಸವನ್ನ ಪರ್ಫೆಕ್ಟ್ ಆಗಿ ನಿಭಾಯಿಸಿ ಬಿಟ್ಟರೆ, ನೇಮ್ ಜೊತೆ ಫೇಮ್ ನಿಮ್ಮದಾಗುತ್ತೆ. ಎಲ್ಲ ಜವಾಬ್ದಾರಿ ಹೊತ್ತು, ವೆಡ್ಡಿಂಗ್ ಪ್ಲಾನರ್ ಆಗಲು ನೀವು ಸಿದ್ಧವಿದ್ದರೆ, ಈ ಉದ್ಯಮ ನೀವು ಶುರು ಮಾಡಬಹುದು.
ಮ್ಯಾರೇಜ್ ಹಾಲ್ ಡೆಕೋರೇಷನ್: ಅಲಂಕಾರ ಮಾಡೋದು ಒಂದು ಕಲೆ. ಅದರಲ್ಲೂ ಮದುವೆ ಕಾರ್ಯಕ್ರಮಗಳಲ್ಲಿ ಮದುವೆ ಮನೆಯನ್ನ ಅಲಂಕಾರ ಗೊಳಿಸೋದು ಇನ್ನೂ ಕಷ್ಟ. ಆದ್ರೆ ಮದುವೆ ಮನೆ ಮಧುಮಕ್ಕಳಿಗಿಂತಲೂ ಚಂದವಿದ್ದರೆ, ಜನ ಹೆಚ್ಚಾಗಿ ಹೊಗಳೋದು ಮ್ಯಾರೇಜ್ ಹಾಲ್ ಡೆಕೋರೇಷನ್ ಎಷ್ಟು ಚೆನ್ನಾಗಿತ್ತಲ್ಲಾ ಅಂತಾ. ನೀವು ಕೂಡಾ ಮ್ಯಾರೇಜ್ ಹಾಲ್ ಡೆಕೋರೇಷನ್‌ನ್ನ ಚೆನ್ನಾಗಿ ಮಾಡುವವರಾದ್ರೆ, ಈ ಉದ್ಯಮ ಕೂಡಾ ಮಾಡಬಹುದು. ನೀವು ವೆಡ್ಡಿಂಗ್ ಪ್ಲಾನರ್‌ಗಳ ಟೀಮ್ ಕೂಡಾ ಸೇರಬಹುದು.
ಕಂಪ್ಯೂಟರ್ ಕ್ಲಾಸ್: ಈಗಿನ ಪೋಷಕರು ತಮ್ಮ ಮಕ್ಕಳು ಚುರುಕಾಗಲಿ, ಬುದ್ಧಿವಂತರಾಗಲಿ,ಕಂಪ್ಯೂಟರ್ ಕಲಿಕೆ ಬಗ್ಗೆ ತಿಳಿದುಕೊಳ್ಳಿ ಅನ್ನೋ ಕಾರಣಕ್ಕೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕಂಪ್ಯೂಟರ್ ಕ್ಲಾಸಿಗೆ ಕಳುಹಿಸುತ್ತಾರೆ. ನೀವೇನಾದ್ರೂ ಪುಟ್ಟ ಮಕ್ಕಳಿಂದ ದೊಡ್ಡವರ ತನಕವೂ ಎಲ್ಲರಿಗೂ ಕಂಪ್ಯೂಟರ್ ಕಲಿಸಿ ಕೊಡುವ ತಿಳುವಳಿಕೆ ಹೊಂದಿದ್ದರೆ. ಕಂಪ್ಯೂಟರ ಬಗ್ಗೆ ಇಂಚಿಂಚು ಮಾಹಿತಿ ಹೊಂದಿದ್ದರೆ, ಕ್ಲಾಸ್ ಓಪೆನ್ ಮಾಡುವ ಬಗ್ಗೆ ಎಲ್ಲ ಮಾಹಿತಿ ಪಡೆದು ಕಂಪ್ಯೂಟರ್ ಕ್ಲಾಸ್ ತೆರೆಯಬಹುದು.
ಸ್ಟೇಷನರಿ ಸ್ಟೋರ್: ಸ್ಟೇಷನರಿ ಶಾಪ್‌ನಲ್ಲಿ ಸ್ಕೂಲ್ ಕಾಲೇಜ್ ವಿದ್ಯಾರ್ಥಿಗಳು ಪೆನ್ ಪೆನ್ಸಿಲ್ ಪುಸ್ತಕ ಇತ್ಯಾದಿಗಳನ್ನ ಖರೀದಿಸಲು ಬರ್ತಾರೆ. ಅಲ್ಲದೇ ಪೇಯ್ಟಿಂಗ್ ಮಾಡುವವರು, ಕ್ರಾಫ್ಟ್ ವರ್ಕ್ ಮಾಡುವವರು ಕೂಡ ಸ್ಟೇಷನರಿ ಅಂಗಡಿ ಮೊರೆ ಹೋಗ್ತಾರೆ. ಹೀಗಾಗಿ ಹಲವರಿಗೆ ಸ್ಟೇಷನರಿ ಅಗತ್ಯವಿರುವುದರಿಂದ ಸ್ಟೇಷನರಿ ಸ್ಟೋರ್ ಓಪೆನ್ ಮಾಡಬಹುದು.
ಟೇಲರ್ ಶಾಪ್: ನೀವು ಬಟ್ಟೆ ಸ್ಟಿಚ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಆಗಿದ್ರೆ ಒಂದು ಟೇಲರ್ ಶಾಪ್ ಇಡಬಹುದು. ಈಗಿನ ಕಾಲದಲ್ಲಿ ಫ್ಯಾಷನ್ ಡ್ರೆಸಸ್‌ಗೆ ಹೆಚ್ಚು ಬೆಲೆ ಇರತ್ತೆ. ಸ್ವಲ್ಪ ಮಾಡರ್ನ್ ಸ್ಟೈಲ್ ಚೂಡಿದಾರ, ಬ್ಲೌಸ್ ಸ್ಟಿಚ್ ಮಾಡಿದ್ರೆ, ಬಾಯಿ ಮಾತಿನಿಂದ ನಿಮ್ಮ ಶಾಪ್‌ನಲ್ಲಿ ಗ್ರಾಹಕರು ಹೆಚ್ಚುತ್ತಾರೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.